ಭಾರತ ಯುದ್ಧ ಘೋಷಣೆ? ಗಲ್ವಾನ್‌ ಘರ್ಷಣೆ! ಚೀನಾಗೆ ಸ್ಪೋಟಕ ಶಾಕ್!

masthmagaa.com:

2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೈನಿಕರ ಜೊತೆ ನಡೆದ ಘರ್ಷಣೆ ನಂತ್ರ ಭಾರತೀಯ ವಾಯುಪಡೆ ಯುದ್ಧ ರಂಗಕ್ಕೆ ಭಾಗಶಃ ಧುಮುಕಿತ್ತು ಅಂತ ಮಾಹಿತಿಯೊಂದು ಹೊರಬಿದ್ದಿದೆ. 2020ರ ಜೂನ್ 15ರಂದು ಉಭಯ ದೇಶಗಳ ಸೈನಿಕರ ನಡುವೆ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಇದರಿಂದಾಗಿ ಎರಡೂ ಕಡೆಯಲ್ಲೂ ಯುದ್ದದ ವಾತವರಣ ಭುಗಿಲೆದ್ದಿತ್ತು. ಇನ್ನೇನು ಯುದ್ದ ಆಗುತ್ತೆ ಅನ್ನೋ ಪರಿಸ್ಥಿತಿ ಇತ್ತು. ಇದರ ಅರಿವಿದ್ದ ಭಾರತ, 68 ಸಾವಿರಕ್ಕೂ ಹೆಚ್ಚು ಸೈನಿಕರನ್ನ ಏರ್‌ಲಿಫ್ಟ್‌ ಮೂಲಕ ಲಡಾಖ್‌ನಲ್ಲಿ ನಿಯೋಜನೆ ಮಾಡಿತ್ತು. ಸುಖೋಯ್, ಜಾಗ್ವಾರ್, ಜೆಟ್‌ಗಳನ್ನ ಈ ಪ್ರದೇಶದಲ್ಲಿ ತಕ್ಷಣವೇ ನಿಯೋಜಿಸಿತ್ತು ಅನ್ನೋ ವಿಚಾರ ಗೊತ್ತಾಗಿದೆ. ಅಷ್ಟೇ ಅಲ್ಲ 90 ಯುದ್ದ ಟ್ಯಾಂಕರ್‌ಗಳನ್ನ ಹಾಗೇ ಆರ್ಟಿಲರಿ ಸಿಸ್ಟಂಗಳನ್ನ ಭಾರೀ ಪ್ರಮಾಣದಲ್ಲಿ ಡೆಪ್ಲಾಯ್‌ ಮಾಡಲಾಗಿತ್ತು. ಚೀನಾ ಸೈನಿಕರ ನೆಲೆಗಳು ಮತ್ತು ಚಲನವಲನಗಳ ಮೇಲೆ ನಿಖರವಾಗಿ ಹದ್ದಿನ ಕಣ್ಣಿಡಲಾಗಿತ್ತು. ರಫೇಲ್ ಮತ್ತು ಮಿಗ್ -29 ವಿಮಾನಗಳನ್ನು ಒಳಗೊಂಡಂತೆ ಹಲವು ಯುದ್ಧ ವಿಮಾನಗಳ ಹಲವಾರು ಸ್ಕ್ಯಾಡ್ರನ್‌ಗಳನ್ನು ಗಸ್ತು ನಡೆಸಲು ರೆಡಿ ಇದ್ವು ಅಂತ ತಿಳಿದು ಬಂದಿದೆ. ಈ ವಿಶೇಷ ಕಾರ್ಯಾಚರಣೆ ಅಡಿಯಲ್ಲಿ ಅಂದ್ರೆ ಯುದ್ದಕ್ಕೆ ರೆಡಿಯಾಗೋ ಹಿನ್ನೆಲೆಯಲ್ಲಿ ಪೂರ್ವ ಲಡಾಖ್‌ನ LACಯ ಗಡಿಯುದ್ದಕ್ಕೂ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು IAFನ ಸರಕು ಸಾಗಣೆ ವಿಮಾನಗಳಲ್ಲಿ ಸಾಗಿಸಲಾಗಿತ್ತು, ಅದು ತುಂಬಾ ಕಡಿಮೆ ಅವಧಿಯಲ್ಲಿ ಅವು ಅಲ್ಲಿಗೆ ತಲುಪಿದ್ವು. ರಾಡಾರ್ ವ್ಯವಸ್ಥೆಗಳು, ಫಿರಂಗಿಗಳು ಮತ್ತು ಇತರ ಹಲವು ಎಕ್ಯುಪ್‌ಮೆಂಟ್‌ಗಳನ್ನ ಯುದ್ಧ ಸನ್ನದ್ದ ಸ್ಥಿತಿಯಲ್ಲಿ ಇಡಲಾಗಿತ್ತು ಅಂತ ಟಾಪ್‌ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply