ಚೀನಾ ಮ್ಯಾಪ್‌ ವಿರೋಧ: ಭಾರತದ ಜೊತೆ ಕೈಜೋಡಿಸಿದ ಫಿಲಿಪ್ಪೈನ್ಸ್‌, ಮಲೇಷ್ಯಾ, ವಿಯೆಟ್ನಾಂ

masthmagaa.com:

ಚೀನಾ ತನ್ನ ಗಡಿಭಾಗದ ದೇಶಗಳ ಕೆಲವು ಪ್ರದೇಶಗಳನ್ನ ತನ್ನದು ಅಂತ ಹೇಳಿಕೊಂಡು ಬಿಡುಗಡೆ ಮಾಡಿರುವ ಮ್ಯಾಪ್‌ನ್ನ ಹಲವು ರಾಷ್ಟ್ರಗಳು ರಿಜೆಕ್ಟ್‌ ಮಾಡಿವೆ. ಇತ್ತೀಚೆಗೆ ಚೀನಾ ರಿಲೀಸ್‌ ಮಾಡಿರುವ ತನ್ನ ಮ್ಯಾಪ್‌ನಲ್ಲಿ ಭಾರತದ ಅರುಣಾಚಲ ಪ್ರದೇಶ ಹಾಗೂ ಅಕ್ಸಯ್‌ ಚಿನ್‌ನ್ನ ಸೇರಿಸಿಕೊಂಡಿದೆ. ಚೀನಾದ ಈ ನಡೆಯನ್ನ ಭಾರತ ತೀವ್ರವಾಗಿ ಖಂಡಿಸಿದೆ. ಇದೀಗ ಫಿಲಿಪ್ಪೈನ್ಸ್‌, ಮಲೇಷ್ಯಾ, ವಿಯೆಟ್ನಾಂ ಹಾಗೂ ತೈವಾನ್‌ ಕೂಡ ಈ ಹೊಸ ಮ್ಯಾಪ್‌ನ್ನ ವಿರೋಧಿಸಿವೆ. ಈ ಹೊಸ ಮ್ಯಾಪ್‌ನಲ್ಲಿ ಫಿಲಿಪ್ಪೈನ್ಸ್‌ ಸಮುದ್ರವನ್ನ ಸೇರಿಸಿಕೊಂಡು ರಚಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಫಿಲಿಪ್ಪೈನ್ಸ್‌ ವಿದೇಶಾಂಗ ವ್ಯವಹಾರಗಳ ವಕ್ತಾರ ಮಾ. ಟೆರೆಸಿಟಾ ದಾಜಾ, ಫಿಲಿಪ್ಪೈನ್ಸ್‌ನ ಸಮುದ್ರ ವಲಯದಲ್ಲಿ ಸಾರ್ವಭೌಮತ್ವ ಹೊಂದಲು ಚೀನಾ ಮಾಡ್ತಿರೋ ಪ್ರಯತ್ನಕ್ಕೆ ಅಂತಾರಾಷ್ಟ್ರೀಯ ಕಾನೂನು ಅಡಿಯಲ್ಲಿ ಯಾವುದೇ ಅವಕಾಶವಿಲ್ಲ ಅಂತ ಹೇಳಿದ್ದಾರೆ. ಇತ್ತ ಇದೇ ಮ್ಯಾಪ್‌ನಲ್ಲಿ ಮಲೇಷ್ಯಾದ ಸಮುದ್ರ ಪ್ರದೇಶಗಳನ್ನೂ ಒಳಗೊಂಡಿದೆ. ಈ ಕಾರಣಕ್ಕೆ ರಾಜತಾಂತ್ರಿಕತೆ ಮೂಲಕ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತೆ ಅಂತ ಮಲೇಷ್ಯಾ ಹೇಳಿದೆ. ಇನ್ನೊಂದ್‌ ಕಡೆ ಚೀನಾದ ಮ್ಯಾಪ್‌ನಿಂದ ವಿಯೆಟ್ನಾಂನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಜೊತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹಕ್ಕನ್ನು ಪ್ರತಿಪಾದಿಸುವ ಚೀನಾವನ್ನ ನಾವು ವಿರೋಧಿಸುತ್ತೇವೆ ಅಂತ ವಿಯೆಟ್ನಾಂ ಹೇಳಿದೆ.

-masthmagaa.com

Contact Us for Advertisement

Leave a Reply