ಕೊರಿಯಾ ಕ್ಷಿಪಣಿ ಪರೀಕ್ಷೆ: ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ ತಜ್ಞರ ಸಭೆ

masthmagaa.com:

ಜಪಾನ್, ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಪರಮಾಣು ಸಂಬಂಧಿತ ಪ್ರತಿನಿಧಿಗಳು ಟೋಕಿಯೋದಲ್ಲಿ ಸಭೆ ನಡೆಸಿದ್ದಾರೆ. ಉತ್ತರ ಕೊರಿಯಾ ಇತ್ತೀಚೆಗೆ ನಡೆಸಿದ ಲಾಂಗ್ ರೇಂಜ್ ಕ್ರೂಸ್ ಮಿಸೈಲ್ ಮತ್ತು ಅದ್ರ ಪರಮಾಣು ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಅಂತ ಗೊತ್ತಾಗಿದೆ. ನಿನ್ನೆಯಷ್ಟೇ ಉತ್ತರ ಕೊರಿಯಾ ತಾನು ಯಶಸ್ವಿಯಾಗಿ ಕ್ಷಿಪಣಿ ಪರಿಕ್ಷೆ ನಡೆಸಿದ್ದಾಗಿ ಘೋಷಿಸಿತ್ತು. ಆದ್ರೆ ಇದು ಉತ್ತರ ಕೊರಿಯಾದ ಮೊಟ್ಟ ಮೊದಲ ಪರಮಾಣು ಸಾಮರ್ಥ್ಯ ಹೊಂದಿರೋ ಅಸ್ತ್ರವಾಗಿರಬಹುದು ಅಂತ ತಜ್ಞರು ಎಚ್ಚರಿಸಿದ್ದಾರೆ. ಇದ್ರ ನಡುವೆ ಉತ್ತರ ಕೊರಿಯಾ ಜೊತೆಗೆ ಅಮೆರಿಕ, ದಕ್ಷಿಣ ಕೊರಿಯಾಗೆ ಸಂಘರ್ಷ ಇದೆ. ಹೀಗಾಗಿ ಅದನ್ನ ಹೇಗೆ ಬಗೆಹರಿಸಿಕೊಳ್ಳಬಹುದು ಅನ್ನೋದರ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಅಂದಹಾಗೆ ಕ್ಷಿಪಣಿ ಪರೀಕ್ಷೆ ಹೊರತಾಗಿಯೂ ಉತ್ತರ ಕೊರಿಯಾ ಜೊತೆಗೆ ಒಳ್ಳೆ ಸಂಬಂಧ ಹೊಂದಲು ಸಿದ್ಧ ಅಂತ ಅಮೆರಿಕ ಹೇಳಿದೆ. ಆದ್ರೆ ಪರಮಾಣು ಸಂಬಂಧಿತ ನಿರ್ಬಂಧವನ್ನು ಮಾತ್ರ ತೆರವುಗೊಳಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಉತ್ತರ ಕೊರಿಯಾ ಕೂಡ ಅಮೆರಿಕದಿಂದ ನಿರ್ಬಂಧ ತೆರವುಗೊಳಿಸೋ ಲಕ್ಷಣ ಕಾಣ್ತಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply