ಕೊರೋನ ಇಳಿಕೆ ಬೆನ್ನಲ್ಲೇ ಟೂರಿಸ್ಟ್ ಪ್ಲೇಸ್ ಫುಲ್! ಸರ್ಕಾರ ವಾರ್ನಿಂಗ್

masthmagaa.com:

ದೇಶದಲ್ಲಿ ಕೊರೋನಾ 2ನೇ ಅಲೆ ಇನ್ನೂ ಹೋಗಿಲ್ಲ. ಪ್ರತಿದಿನ 40 ಸಾವಿರಕ್ಕಿಂತಲೂ ಹೆಚ್ಚು ಮಂದಿಗೆ ಕೊರೋನಾ ಬರ್ತಿದೆ. ಆದ್ರೂ ಕೂಡಾ 2ನೇ ಅಲೆಯ ಭಯಾನಕತೆಯನ್ನು ಮರೆತಿರೋ ಜನ ಮತ್ತೆ ಫುಲ್ ಬಿಂದಾಸ್ ಆಗಿ ಓಡಾಡೋಕೆ ಶುರು ಮಾಡಿದ್ದಾರೆ. 2ನೇ ಅಲೆ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ನೀತಿ ಆಯೋಗದ ಸದಸ್ಯ, ಕೋವಿಡ್ ಟಾಸ್ಕ್​ ಫೋರ್ಸ್​ ಮುಖ್ಯಸ್ಥ ಡಾ.ವಿಕೆ ಪೌಲ್​​, ಪ್ರವಾಸಿ ಸ್ಥಳಗಳಲ್ಲಿ ಕೊರೋನಾ ವೇಗವಾಗಿ ಹರಡುತ್ತೆ.. ಪ್ರವಾಸಿ ಸ್ಥಳಗಳು ಬೇಕು. ಆದ್ರೆ ನಾವು ಬೇಜವಾಬ್ದಾರಿಯಿಂದ ವರ್ತಿಸಿದ್ರೆ, ಕೊರೋನಾ ರೂಲ್ಸ್ ಫಾಲೋ ಮಾಡದೇ ಇದ್ರೆ ಕೊರೋನಾ ಮತ್ತೆ ವೇಗವಾಗಿ ಹರಡುತ್ತೆ. ಅಂಥವರು ಬೇರೆ ಸ್ಥಳಗಳಿಗೆ ಹೋಗಿ ಮತ್ತಷ್ಟು ಮಂದಿಗೆ ಕೊರೋನಾ ಹರಡ್ತಾರೆ. ಕೊರೋನಾ ಇನ್ನೂ ಫುಲ್ ಹೋಗಿಲ್ಲ. ಹೀಗಾಗಿ ಕೊರೋನಾ ರೂಲ್ಸ್ ವಿಚಾರದಲ್ಲಿ ಮೃದು ದೋರಣೆ ತೋರ್ಸೋದು ಸರಿಯಲ್ಲ ಅಂತ ಎಚ್ಚರಿಸಿದ್ದಾರೆ. ಇನ್ನ ಇದ್ರ ನಡುವೆಯೇ ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಬ್ಬರಲ್ಲಿ ಡಬಲ್ ಮ್ಯೂಟೆಂಟ್ ವೈರಾಣು ಕಪ್ಪ ಪತ್ತೆಯಾಗಿದೆ. 107 ಮಂದಿಯಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಮತ್ತೊಂದ್ಕಡೆ ಕಳೆದ ವಾರ ಡೈಲಿ ಕೇಸಸ್​​ನಲ್ಲಿ ಸರಾಸರಿ 8 ಪರ್ಸೆಂಟ್​​ನಷ್ಟು ಕುಸಿತ ಕಂಡಿದೆ. ದೇಶದಲ್ಲಿ ಕಳೆದ ವಾರ ವರದಿಯಾದ ಒಟ್ಟು ಕೇಸ್​​ನಲ್ಲಿ 80 ಪರ್ಸೆಂಟ್​ನಷ್ಟು ಕೇಸ್​ 90 ಜಿಲ್ಲೆಗಳಲ್ಲೇ ವರದಿಯಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

-masthmagaa.com:

 

Contact Us for Advertisement

Leave a Reply