ಏರ್‌ಫೋರ್ಸ್ ಬೆಂಗಾವಲು ಪಡೆ ಮೇಲೆ ದಾಳಿ‌: ಉಗ್ರರ ಗುರುತು ಬಹಿರಂಗ!

masthmagaa.com:

ಮೇ 4ರಂದು ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದಿದ್ದ ಉಗ್ರದಾಳಿ ವಿಚಾರವಾಗಿ ಮಹತ್ವದ ಬೆಳವಣಿಗೆಯಾಗಿದೆ. ಏರ್‌ಫೋರ್ಸ್ ಬೆಂಗಾವಲು ಪಡೆ ಮೇಲೆ ದಾಳಿ‌ ಮಾಡಿದ್ದ ಉಗ್ರರ ಫೋಟೋಗಳು ಸಿಕ್ಕಿವೆ. ತನಿಖೆಯಲ್ಲಿ ದಾಳಿ ಮಾಡಿರೋ ಈ ಉಗ್ರರನ್ನ ಪಾಕ್‌ ಆರ್ಮಿಯ ಮಾಜಿ ಕಮ್ಯಾಂಡೋ ಇಲಿಯಾಸ್‌ ಹಾಗೂ LET ಸಂಘಟನೆಯ ಕಮ್ಯಾಂಡರ್‌ ಅಬು ಹಂಜಾ ಹಾಗೂ ಹದೂನ್ ಅಂತ ಗುರುತಿಸಲಾಗಿದೆ. ಇವರೆಲ್ಲಾ ಜೈಶ್‌ ಅಡಿಯಲ್ಲಿ ಬರೋ ಉಗ್ರ ಸಂಘಟನೆ ಒಂದಕ್ಕೆ ಸೇರಿದ್ದು, ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು. ದಾಳಿಯಲ್ಲಿ ಏರ್‌ಪೋರ್ಸ್‌ ಸೈನಿಕರೊಬ್ರು ಮೃತಪಟ್ಟಿದ್ರು. ಸದ್ಯ ರಜೌರಿ ಹಾಗೂ ಪೂಂಚ್‌ನಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

-masthmagaa.com

Contact Us for Advertisement

Leave a Reply