ಇವತ್ತು ಭಾರತದ ವಾಯುಸೇನೆ ಹುಟ್ಟುಹಬ್ಬ…ಎಷ್ಟು ವರ್ಷ ಗೊತ್ತಾ..?

ಭಾರತದ ವಾಯುಸೇನೆಗೆ ಇವತ್ತು 87ನೇ ವರ್ಷದ ಹುಟ್ಟುಹಬ್ಬ. ಉತ್ತರ ಪ್ರದೇಶದ ಘಾಜಿಯಾಬಾದ್‍ನ ಹಿಂಡನ್ ಏರ್ ಫೋರ್ಸ್ ಸ್ಟೇಷನ್‍ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಐಎಎಫ್ ನ ಹಲವು ಸಾರಿಗೆ ವಿಮಾನಗಳು, ಹೆಲಿಕಾಪ್ಟರ್‍ಗಳು ಮತ್ತು ಯುದ್ಧ ವಿಮಾನಗಳು ಪ್ರದರ್ಶನ ನೀಡಲಿವೆ. ನೂತನ ವಾಯುಸೇನಾ ಮುಖ್ಯಸ್ಥ RKS ಬದೌರಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ವಾಯುಸೇನೆಯ ಎಲ್ಲಾ ಸಿಬ್ಬಂದಿ ಮತ್ತು ಕುಟುಂಬಸ್ಥರಿಗೆ ಶುಭಾಶಯಗಳು. ಧೈರ್ಯ, ಕಷ್ಟಸಹಿಷ್ಣುತೆ ಮತ್ತು ಕಳಂಕರಹಿತ ಸೇವೆಗೆ ಭಾರತೀಯ ವಾಯುಸೇನೆ ಉತ್ತಮ ನಿದರ್ಶನ ಎಂದಿದ್ದಾರೆ.

ಈ ಶುಭ ಸಂದರ್ಭದಲ್ಲೇ ಭಾರತೀಯ ಸೇನೆಗೆ ರಫೇಲ್ ಯುದ್ಧ ವಿಮಾನ ಕೂಡ ಸೇರುತ್ತಿದೆ. ಫ್ರಾನ್ಸ್‍ನ ಡಸಾಲ್ಟ್ ಸಂಸ್ಥೆ ನಿರ್ಮಿಸಿರೋ ಮೊದಲ ಯುದ್ಧ ವಿಮಾನವನ್ನು ಇವತ್ತು ರಾಜನಾಥ್ ಸಿಂಗ್ ಸ್ವೀಕರಿಸಲಿದ್ದಾರೆ.

Contact Us for Advertisement

Leave a Reply