ವಾಯುಯಾನ ಕ್ಷೇತ್ರದಲ್ಲೇ ಅತಿದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಫ್ರಾನ್ಸ್‌!

masthmagaa.com:

ಜಗತ್ತಿನ ಬೆಸ್ಟ್‌ ಬಿಸೆನೆಸ್ ಕಪಲ್‌ಗಳಾಗಿ ಹೊರಹೊಮ್ಮುತ್ತಿರೋ ಭಾರತ ಹಾಗೂ ಫ್ರಾನ್ಸ್‌ ಈಗ ಮತ್ತೊಂದು ಐತಿಹಾಸಿಕ ಸಂಬಂಧ ವೃದ್ದಿಗೆ ಸಾಕ್ಷಿಯಾಗಿವೆ. ಜಗತ್ತಿನ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರೋ ಫ್ರಾನ್ಸ್‌ ಮೂಲದ ಏರ್‌ಬಸ್ ಹಾಗೂ‌ ಭಾರತದ ಹೆಮ್ಮೆಯ ವಿಮಾನಯಾನ ಸಂಸ್ಥೆ ಟಾಟಾ ಹೊಸ ಒಪ್ಪಂದ ಮಾಡಿಕೊಂಡಿವೆ. ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾಗೆ ಹೊಸದಾಗಿ ಬರೋಬ್ಬರಿ 250 ವಿಮಾನಗಳನ್ನ ಖರೀದಿ ಮಾಡೋ ಒಪ್ಪಂದ ಪೈನಲ್‌ ಆಗಿದೆ. ಇವತ್ತು ಇದರ ಅಧಿಕೃತ ಘೋಷಣೆ ಕೂಡ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಹಾಗೂ ಉದ್ಯಮಿ ರತನ್‌ ಟಾಟಾ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಈ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ, ಈ ಇಬ್ರೂ ನಾಯಕರು ಅಧಿಕೃತವಾಗಿ ಈ ಹೊಸ ಅಗ್ರಿಮೆಂಟ್‌ನ್ನ ಅನೌನ್ಸ್‌ ಮಾಡಿದ್ದಾರೆ. ಈ ಒಪ್ಪಂದ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಂಬಂಧದಲ್ಲಿ ಒಂದು ಹೊಸ ಮೈಲಿಗಲ್ಲು ಅಂತ ಮ್ಯಾಕ್ರಾನ್‌ ಬಣ್ಣಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಈ ಒಪ್ಪಂದ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಂಬಂಧ ಹೇಗಿದೆ ಅನ್ನೋದನ್ನ ಬಿಂಬಿಸುತ್ತೆ. ವಾಯುಯಾನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ದೇಶವಾಗಲಿದೆ. ಮುಂದಿನ 15 ವರ್ಷಗಳಲ್ಲಿ 2,500 ವಿಮಾನಗಳು ಭಾರತಕ್ಕೆ ಬೇಕಾಗ್ತವೆ ಅಂತ ಮೋದಿ ಹೇಳಿದ್ದಾರೆ. ಜೊತೆಗೆ ಭದ್ರತೆ, ಇಂಡೊ-ಪೆಸಿಫಿಕ್‌ ಭಾಗದಲ್ಲಿನ ಸ್ಥಿರತೆ ಅಥ್ವಾ ಜಾಗತಿಕ ಆಹಾರ ಭದ್ರತೆ ಮತ್ತು ಆರೋಗ್ಯ ಭದ್ರತೆಯ ವಿಚಾರ ಯಾವುದೇ ಇರ್ಲಿ ಭಾರತ ಮತ್ತು ಫ್ರಾನ್ಸ್‌ ಒಟ್ಟಾಗಿ ಪಾಸಿಟಿವ್‌ ಕೊಡುಗೆ ನೀಡುತ್ತವೆ ಅಂತ ಮೋದಿ ಬಣ್ಣಿಸಿದ್ದಾರೆ.

-masthmagaa.com

Contact Us for Advertisement

Leave a Reply