ಕೇರಳದಲ್ಲಿ ವಿಮಾನ ಪತನ: ಲ್ಯಾಂಡ್ ಆಗುವ ವೇಳೆ ಎರಡು ತುಂಡು

masthmagaa.com:

ಕೇರಳದ ಕೋಯಿಕ್ಕೋಡ್​ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ದುಬೈನಿಂದ ಬಂದಿದ್ದ ಏರ್​ ಇಂಡಿಯಾ IX-1344 ವಿಮಾನ ಕರಿಪುರ ಏರ್​ಪೋರ್ಟ್​ನಲ್ಲಿ ರಾತ್ರಿ 7.45ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದ್ರೆ ಲ್ಯಾಂಡಿಂಗ್ ವೇಳೆ ರನ್​ವೇಯಿಂದ ಜಾರಿದ ವಿಮಾನ ಎರಡು ತುಂಡಾಗಿದೆ.

ವಿಮಾನದಲ್ಲಿ 184 ಜನರಿದ್ದರು. ಇದರಲ್ಲಿ 10 ಮಕ್ಕಳು ಮತ್ತು 6 ಸಿಬ್ಬಂದಿ ಸೇರಿದ್ದಾರೆ ಅಂತ ಏರ್ ಇಂಡಿಯಾ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ವಿಸ್ತೃತ ತನಿಖೆಗೆ ಆದೇಶಿಸಿದೆ.

ವಿಮಾನ ಪತನಕ್ಕೆ ನಿಖರ ಕಾರಣವೇನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಕೇರಳದ ಹಲವೆಡೆ ಭಾರಿ ಮಳೆಯಾಗ್ತಿದೆ. ಹೀಗಾಗಿಯೇ ಪೈಲಟ್​ಗೆ ರನ್​ವೇ ಕಾಣಿಸಿಲ್ವಾ ಅನ್ನೋ ಅನುಮಾನ ಮೂಡಿದೆ. ಆದ್ರೆ ರನ್​ವೇಯಿಂದ ಪಕ್ಕಕ್ಕೆ ಜಾರಿದ ವಿಮಾನ 2 ತುಂಡಾಗಿರೋದು ವಿಚಿತ್ರ ಎನಿಸುತ್ತಿದೆ.

-masthmagaa.com

Contact Us for Advertisement

Leave a Reply