ದೆಹಲಿಯಲ್ಲಿ ವಾಯುಮಾಲಿನ್ಯ! ಭಾನುವಾರದವರೆಗೆ ಎಲ್ಲವೂ ಬಂದ್ ಬಂದ್!

masthmagaa.com:

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಆದ್ರೆ ದೆಹಲಿ ಸರ್ಕಾರ ನೀಡಿದ್ದ ವರ್ಕ್​ ಫ್ರಂ ಹೋಂ ಸಲಹೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಸಂಬಂಧ ನಿನ್ನೆ ಕೇಂದ್ರ ಸರ್ಕಾರ, ದೆಹಲಿ, ಹರಿಯಾಣ, ಪಂಜಾಬ್ ಸರ್ಕಾರದ ಅಧಿಕಾರಿಗಳು ಸಭೆ ನಡೆಸಿದ್ರು. ಇದ್ರಲ್ಲಿ ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಮತ್ತು ಎಲ್ಲರಿಗೂ ವರ್ಕ್​​ಫ್ರಂ ಹೋಂಗೆ ಅವಕಾಶ ನೀಡಬೇಕು ಅಂತ ಪ್ರಸ್ತಾವನೆ ಮುಂದಿಟ್ಟಿತ್ತು. ಆದ್ರೆ ಇವತ್ತು ಸುಪ್ರೀಂಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಿರೋ ಕೇಂದ್ರ ಸರ್ಕಾರ, ಈ ಹಿಂದೆ ಕೊರೋನಾದಿಂದಾಗಿ ದೀರ್ಘಕಾಲ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ದೆಹಲಿಯಲ್ಲಿ ಸರ್ಕಾರಿ ವಾಹನಗಳು ತುಂಬಾ ಜಾಸ್ತಿಯೇನೂ ಇಲ್ಲ ಅಂತ ಹೇಳಿದೆ. ಇನ್ನು ಕೂಳೆ ಸುಡೋ ರೈತರಿಗೆ ದಂಡ ವಿಧಿಸಬೇಕು ಅನ್ನೋ ವಾದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್​​, ನಾವು ರೈತರಿಗೆ ದಂಡ ವಿಧಿಸಲು ಸಿದ್ಧವಿಲ್ಲ. ರೈತರು ಕೂಳೆ ಸುಡದಂತೆ ಸರ್ಕಾರವೇ ಮನವೊಲಿಸಬೇಕು ಅಂತ ಹೇಳಿದೆ.

ಇನ್ನು ವಾಯುಮಾಲಿನ್ಯ ಸಂಬಂಧ ಪ್ರತಿಕ್ರಿಯಿಸಿದ ದೆಹಲಿ ಪರಿಸರ ಸಚಿವ ಗೋಪಾಲ್ ರೈ, ಮುಂದಿನ ಆದೇಶದವರೆಗೆ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು, ಟ್ರೇನಿಂಗ್ ಸೆಂಟರ್​​​​, ಲೈಬ್ರರಿ ಬಂದ್ ಆಗಿರುತ್ತೆ. ನಿರ್ಮಾಣ ಮತ್ತು ಡೆಮೋಲಿಷನ್​ ಕಾಮಗಾರಿ ಮೇಲೂ ನವೆಂಬರ್ 21ರವರೆಗೆ ನಿರ್ಬಂಧ ಇರುತ್ತೆ ಅಂತ ಗೋಪಾಲ್ ರೈ ತಿಳಿಸಿದ್ದಾರೆ. ಅಗತ್ಯ ಸೇವೆ ಹೊರತುಪಡಿಸಿ, ಉಳಿದ ಎಲ್ಲಾ ವಾಹನಗಳು ದೆಹಲಿ ಪ್ರವೇಶಕ್ಕೆ ಅವಕಾಶ ನೀಡದಂತೆಯೂ ನಾವು ಈಗಾಗಲೇ ಸೂಚಿಸಿದ್ದೀವಿ ಅಂತಲೂ ಗೋಪಾಲ್ ರೈ ತಿಳಿಸಿದ್ದಾರೆ. ಜೊತೆಗೆ ಭಾನುವಾರದವರೆಗೆ ಸರ್ಕಾರಿ ನೌಕರರು ಎಲ್ಲರು ಮನೆಯಿಂದ ಕೆಲಸ ಮಾಡಬೇಕು. ಅದೇ ಖಾಸಗಿ ಕಂಪನಿಗಳು ಕೂಡ 50 ಪರ್ಸೆಂಟ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು. ಸರ್ಕಾರಿ ಸಾರಿಗೆ ಕಂಪ್ಲೀಟ್​ ಬಂದ್ ಮಾಡಲಾಗುತ್ತೆ. 11 ಪವರ್ ಪ್ಲಾಂಟ್​​ಗಳಲ್ಲಿ 6 ಬಂದ್ ಮಾಡ್ಬೇಕು ಅಂತ ಕೂಡ ಆದೇಶಿಸಲಾಗಿದೆ.

-masthmagaa.com

Contact Us for Advertisement

Leave a Reply