ದೇಶದಲ್ಲಿ ವಾಯುಮಾಲಿನ್ಯದಿಂದ ಕಡಿಮೆಯಾಗ್ತಿದೆ ಆಯಸ್ಸು: ವರದಿ

masthmagaa.com:

ಭಾರತದ ವಾಯುಮಾಲಿನ್ಯ ಪ್ರಮಾಣ ಭೌಗೋಳಿಕವಾಗಿ ವಿಸ್ತರಿಸ್ತಾ ಇದೆ ಅಂತ ಅಮೆರಿಕದ ಅಧ್ಯಯನವೊಂದು ಹೇಳಿದೆ. ದೇಶದಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವಾಯುಮಾಲಿನ್ಯ ನಿರಂತರವಾಗಿ ಜಾಸ್ತಿಯಾಗ್ತಿದ್ದು, ಇಲ್ಲಿನ ಒಂದು ಪ್ರಮಾಣದ ಜನ 2.5ರಿಂದ 2.9 ವರ್ಷದಷ್ಟು ಜೀವಿತಾವಧಿಯನ್ನು ಕಳೆದುಕೊಳ್ತಿದ್ದಾರೆ. ಉತ್ತರ ಭಾರತದ ಸುಮಾರು 48 ಕೋಟಿಯಷ್ಟು ಅಥವಾ 40 ಪರ್ಸೆಂಟ್​​ನಷ್ಟು ಜನ ಮಲಿನಗೊಂಡ ವಾತಾವರಣದಲ್ಲಿ ಬದುಕುತ್ತಿದ್ದು, ಇವರ 9 ವರ್ಷಗಳಷ್ಟು ಜೀವಿತಾವಧಿ ಕಡಿಮೆಯಾಗ್ತಿದೆ ಅಂತ ಈ ಅಧ್ಯಯನ ಹೇಳಿದೆ. ಅಂದಹಾಗೆ ಚಿಕಾಗೋ ಯುನಿವರ್ಸಿಟಿಯ Energy Policy Institute ಈ ವರದಿ ಸಿದ್ಧಪಡಿಸಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗೈಡ್​ಲೈನ್ಸ್ ಪ್ರಕಾರ ವಾಯುಮಾಲಿನ್ಯ ನಿಯಂತ್ರಿಸಿದ್ರೆ ಜನ 5.6 ವರ್ಷ ಬದುಕುತ್ತಾರೆ ಅಂತ ಕೂಡ ಹೇಳಲಾಗಿದೆ.

-masthmagaa.com

Contact Us for Advertisement

Leave a Reply