ನೇಪಾಳದ ಶೆಫ್‌ ಆದ ತಮಿಳು ನಟ ಅಜಿತ್‌

masthmagaa.com:

ತಮಿಳು ನಟ ಅಜಿತ್ ಕುಮಾರ್ ನೇಪಾಳದ ರೆಸ್ಟೋರೆಂಟ್‌ನಲ್ಲಿ ಶೆಫ್‌ರಂತೆ ಟೋಪಿ ಧರಿಸಿ, ಅಭಿಮಾನಿಗಳೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಬೈಕರ್‌ ಆಗಿರುವ ಅಜಿತ್‌ ಕುಮಾರ್‌ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬೈಕ್‌ನಲ್ಲಿ ದೇಶದ ಉದ್ದಗಲವನ್ನು ಸುತ್ತುತ್ತಿದ್ದಾರೆ. ಇತ್ತೀಚಿಗೆ ತಮ್ಮ ಬೈಕಿಂಗ್‌ ಟ್ರಿಪ್‌ನಲ್ಲಿ ನೇಪಾಳ ಕಡೆ ಹೋಗಿದ್ದಾರೆ. ನೇಪಾಳದ ರೆಸ್ಟೋರೆಂಟ್‌ನಲ್ಲಿ ಶೆಫ್‌ನಂತೆ ಟೋಪಿ ಹಾಕಿ ಅಡುಗೆಯನ್ನೂ ಸಹ ಮಾಡಿದ್ದಾರೆ. ಅಡುಗೆ ಜೊತೆಯಲ್ಲೇ ತಮ್ಮ ಫ್ಯಾನ್ಸ್‌ ತೆಗೆದ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೊ ಟ್ಟಿಟರ್‌ನಲ್ಲಿ ಅವರ ಅಭಿಮಾನಿಯೊಬ್ರು ಶೇರ್‌ ಮಾಡಿಕೊಂಡಿದ್ದಾರೆ.

ಅಜಿತ್ ಅವರು ಕಾರ್ಗಿಲ್, ಲೇಹ್, ಲಡಾಖ್, ಜಮ್ಮು, ಶ್ರೀನಗರ, ಮನಾಲಿ, ರಿಷಿಕೇಶ್ ಮತ್ತು ಹರಿದ್ವಾರ ಸೇರಿದಂತೆ ಇತರ ಸ್ಥಳಗಳಿಗೆ ಬೈಕ್‌ನಲ್ಲೇ ಟ್ರಿಪ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply