ಅಜಿತ್​ ಕುಮಾರ್​ ತಂದೆ ಪಿ.​ ಸುಬ್ರಮಣಿಯಂ ನಿಧನ

masthmagaa.com:

ನಟ ಅಜಿತ್‌ ಕುಮಾರ್‌ ಅವರ ತಂದೆ ಪಿ.​ ಸುಬ್ರಮಣಿಯಂ ಅವರು ಇಂದು (ಮಾರ್ಚ್‌ 24 ) ಬೆಳಿಗ್ಗೆ ನಿಧನರಾಗಿದ್ದಾರೆ. 85 ವರ್ಷದ ಇವರು ಪಾರ್ಶ್ವವಾಯು ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಜಿತ್‌ ಕುಮಾರ್‌ ಮತ್ತು ಅವರ ಪತ್ನಿ ಹಾಗೂ ಮಕ್ಕಳು ವಿದೇಶದಲ್ಲಿ ಇದ್ದಂಥ ಸಂರ್ಭದಲ್ಲಿ ಈ ಘಟನೆ ಸಂಭವಿಸಿದೆ. ತಂದೆ ನಿಧನ ಆಗಿದ್ದರಿಂದ ಅವರು ಶೀಘ್ರವೇ ಚೆನ್ನೈಗೆ ಮರಳಲಿದ್ದಾರೆ. ಪಿ.​ ಸುಬ್ರಮಣಿಯಂ ಮರಣ ವಾರ್ತೆಯನ್ನು ಕುಟುಂಬದವರು ಸೋಶಿಯಲ್​ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ.ಚೆನ್ನೈನ ಬೆಸೆಂಟ್‌​ ನಗರದ​ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ. ಪಿ.​ ಸುಬ್ರಮಣಿಯಂ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ತಮಿಳು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

-masthmagaa.com

Contact Us for Advertisement

Leave a Reply