ಕಾಶ್ಮೀರವನ್ನು ಇಸ್ಲಾಂ ವಿರೋಧಿಗಳಿಂದ ಸ್ವಾತಂತ್ರ್ಯಗೊಳಿಸಬೇಕು ಎಂದ ಅಲ್​​​ಖೈದಾ

masthmagaa.com:

ಈ ನಡುವೆ ಅಮೆರಿಕದ ಟ್ವಿನ್ ಟವರ್ ಬೀಳಿಸಿದ್ರಲ್ವಾ ಆ ಉಗ್ರ ಸಂಘಟನೆ ಕೂಡ ತಾಲಿಬಾನಿಗಳಿಗೆ ಶುಭಾಶಯ ಕೋರಿದೆ. ಅಷ್ಟೆ ಆಗಿದ್ರೆ ಏನಾದ್ರು ಮಾಡ್ಕೊಂಡು ಸಾಯ್ಲಿ ಅಂತ ಸುಮ್ನೆ ಇರಬೋದಿತ್ತು. ಆದ್ರೆ ಇದೇ ವೇಳೆ ಕಾಶ್ಮೀರದ ಬಗ್ಗೆನೂ ಮಾತಾಡಿದೆ ಈ ಉಗ್ರ ಸಂಘಟನೆ. ಅಮೆರಿಕ ಸೇನೆ ಕಾಬೂಲ್​ನಿಂದ ಕಂಪ್ಲೀಟ್ ಹೊರಹೋಗೋವರೆಗೆ ಬಾಯಿ ಮುಚ್ಚಿಕೊಂಡಿದ್ದ ಈ ಸಂಘಟನೆ ಅದ್ರ ಬೆನ್ನಲ್ಲೇ ಒಂದು ಸ್ಟೇಟ್ಮೆಂಟ್ ಬಿಡುಗಡೆ ಮಾಡಿದೆ. ಅದ್ರಲ್ಲಿ ಟರ್ಕಿಯ ಲೆವೆಂಟ್, ಸೊಮಾಲಿಯಾ, ಯೆಮೆನ್, ಕಾಶ್ಮೀರ ಮುಂತಾದ ಇಸ್ಲಾಮಿಕ್ ಭೂಮಿಯನ್ನು ಇಸ್ಲಾಂ ವಿರೋಧಿಗಳ ಹಿಡಿತದಿಂದ ಸ್ವಾತಂತ್ರ್ಯಗೊಳಿಸಬೇಕು. ಓ ಅಲ್ಲಾ.. ಇಡೀ ಜಗತ್ತಿನಾದ್ಯಂತ ಮುಸ್ಲಿಂ ಕೈದಿಗಳಿಗೆ ಸ್ವಾತಂತ್ರ್ಯ ಕೊಡಿಸು ಅಂತ ಹೇಳಿದ್ದಾರೆ. ಜೊತೆಗೆ ಫುಲ್ ಸ್ಯಾತಂತ್ರ್ಯ ಘೋಷಿಸಿಕೊಂಡ ತಾಲಿಬಾನಿಗಳಿಗೆ ಶುಭಕೋರಿದ್ದಾರೆ.

-masthmagaa.com

Contact Us for Advertisement

Leave a Reply