ಅಸ್ಸಾಂನಲ್ಲಿ ಉಗ್ರ ದಾಳಿಯ ಭೀತಿ: ಹೈ ಅಲರ್ಟ್ ಘೋಷಣೆ

masthmagaa.com:

ಅಸ್ಸಾಂನಲ್ಲಿ ಉಗ್ರರ ಭೀತಿ ಎದುರಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮತ್ತು ಉಗ್ರ ಸಂಘಟನೆ ಅಲ್​ಖೈದಾ ದಾಳಿ ನಡೆಸೋ ಸಾಧ್ಯತೆ ಇದೆ ಅಂತ ಪೊಲೀಸರು ಎಚ್ಚರಿಸಿದ್ದಾರೆ. ಇದ್ರ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆರ್​ಎಸ್​ಎಸ್​​ನ ಗುಂಪುಗಳು, ಸೇನಾ ಪ್ರದೇಶಗಳು ಮತ್ತು ಇತರೆ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸೋ ಸಾಧ್ಯತೆ ಇದೆ. ಬರೀ ಅಸ್ಸಾಂ ಮಾತ್ರವಲ್ಲ.. ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚು ಜನಸೇರೋ ಪ್ರದೇಶಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಅಥವಾ ಪ್ರಯಾಣಿಕರನ್ನು ಗುರಿಯಾಗಿಸಿ ಸ್ಫೋಟ ನಡೆಸಬಹುದು ಅಂತ ಅಸ್ಸಾಂ ಪೊಲೀಸ್​​ನ ಸ್ಪೆಷಲ್ ಬ್ರಾಂಚ್ ಮಾಹಿತಿ ನೀಡಿದೆ. ಅಲ್​ಕೈದಾ ಸಂಘಟನೆ ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಜಿಹಾದ್​ಗೆ ಕರೆ ನೀಡಿದೆ ಅಂತ ಮತ್ತೊಂದು ಮೂಲದಿಂದ ಗೊತ್ತಾಗಿದೆ. ಅಸ್ಸಾಂನ ದರಂಗ್​​ನಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರನ್ನು ತೆರವುಗೊಳಿಸೋ ವೇಳೆ ಹಿಂಸಾಚಾರ ನಡೆದಿತ್ತು. ಇಬ್ಬರು ಪ್ರಾಣ ಕಳ್ಕೊಂಡು, 20 ಮಂದಿ ಗಾಯಗೊಂಡಿದ್ರು. ಈ ಬಗ್ಗೆ ಟ್ವೀಟ್ ಮಾಡಿದ್ದ ಮುಸ್ಲಿಂ ಸಹಕಾರ ಸಂಘಟನೆ, ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಮೇಲಿನ ಹಿಂಸಾಚಾರ ಹೆಚ್ಚಿದೆ. ಇದನ್ನು ಖಂಡಿಸುತ್ತೇವೆ ಅಂತ ಹೇಳಿತ್ತು.

-masthmagaa.com

Contact Us for Advertisement

Leave a Reply