ಸ್ಪೇನ್ ನ ಮ್ಯಾಲೋರ್ಕಾ ದ್ವೀಪದಲ್ಲಿ ಕಾಣಿಸಿಕೊಂಡ ಅಲಿಬಾಬಾದ ಜಾಕ್ ಮಾ

masthmagaa.com:

ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ ಸ್ಪೇನ್ ನ ಮ್ಯಾಲೋರ್ಕಾ ದ್ವೀಪದಲ್ಲಿ ಕಾಣಿಸಿಕೊಂಡಿದ್ದಾರೆ. ಚೀನಾದಲ್ಲಿ ಜಿನ್ಪಿಂಗ್ ಸರ್ಕಾರ ಜಾಕ್ ಮಾ ಕಂಪನಿಗಳ ಮೇಲೆ ದ್ವೇಷ ಸಾಧಿಸೋಕೆ ಶುರು ಮಾಡಿದ ಮೇಲೆ ಜಾಕ್ ಮಾ ಜಾಸ್ತಿ ಕಾಣಿಸಿಕೊಳ್ತಿರಲಿಲ್ಲ. ವಿದೇಶಗಳಿಗಂತೂ ಹೋಗೇ ಇರಲಿಲ್ಲ ಅಥವಾ ಅದನ್ನ ಪಬ್ಲಿಕ್ ಮಾಡಿರಲಿಲ್ಲ. ಆದ್ರೆ ಈಗ ಸ್ಪೇನ್‌ ನ ಮ್ಯಾಲೋರ್ಕಾದ ಅಂಗಡಿಯೊಂದರಲ್ಲಿ ಹೋಮ್ ಡೆಕೋರೇಶನ್ ವಸ್ತುಗಳನ್ನ ಖರೀದಿ ಮಾಡ್ತಿದ್ರು ಅಂತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಜಾಕ್ ಮಾ ಒಡೆತನ ಸೌಥ್ ಚೈನಾ ಮಾರ್ನಿಂಗ್ ಪೋಸ್ಟ್ ಕೂಡ ಈ ಬಗ್ಗೆ ವರದಿ ಮಾಡಿದೆ. ಹಾಂಕಾಂಗ್‌ನಲ್ಲಿ ಕೆಲಕಾಲ ಫ್ಯಾಮಿಲಿಯೊಂದಿಗೆ ಕಾಲ ಕಳೆದ ಬಳಿಕ ಜಾಕ್ ಮಾ ಈಗ ಸ್ಪೇನ್ ನಲ್ಲಿ ಸ್ಟಡಿ ಟೂರ್ ಮಾಡ್ತಿದ್ದಾರೆ. ಕೃಷಿ ಹಾಗೂ ಪರಿಸರ ಸಂಬಂಧಿತ ತಂತ್ರಜ್ಞಾನದ ಮೇಲೆ ಅಧ್ಯಯನ ಮಾಡ್ತಿದ್ದಾರೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply