ಕೊರೋನಾ ಲಸಿಕೆಯ ಮತ್ತೊಂದು ದೊಡ್ಡ ಉಪಯೋಗ ಬಹಿರಂಗ!

masthmagaa.com:

ಕೊರೋನಾ ಲಸಿಕೆ ಹಾಕಿಸಿಕೊಂಡ್ರೂ ಕೊರೋನಾ ಬರುತ್ತೆ ಅಂದ್ಮೇಲೆ ಏನ್ ಯೂಸ್ ಗುರೂ? ಲಸಿಕೆಗಳೆಲ್ಲಾ ಸುಮ್ನೆ, ಅವೆಲ್ಲಾ ಕೆಲಸ ಮಾಡಲ್ಲ! ಅಂತ ಹೇಳೋರು ಸಾಕಷ್ಟು ಜನರಿದ್ದಾರೆ. ಆದ್ರೆ ಲಸಿಕೆ ಹಾಕಿಸಿಕೊಂಡ್ರೆ ಕೊರೋನಾ ವಿರುದ್ಧ ಹೋರಾಡುವ ಶಕ್ತಿ ಬರುತ್ತೆ, ಕೊರೋನಾ ಬಂದ್ರೂ ಅದು ಗಂಭೀರ ಪ್ರಮಾಣದ ಸಮಸ್ಯೆ ಉಂಟು ಮಾಡಲ್ಲ, ನೀವು ಆಸ್ಪತ್ರೆಗೆ ದಾಖಲಾಗೋದನ್ನ ಕೂಡ ಲಸಿಕೆ ತಡೆಯುತ್ತೆ ಅನ್ನೋದು ಹಲವು ಅಧ್ಯಯನಗಳಲ್ಲಿ ಗೊತ್ತಾಗಿದೆ. ಇದೀಗ ಬ್ರಿಟನ್​ನಲ್ಲಿ ನಡೆದ ಮತ್ತೊಂದು ಅಧ್ಯಯನದ ಪ್ರಕಾರ ಲಸಿಕೆ ಹಾಕಿಸಿಕೊಂಡವರಿಂದ ಕೊರೋನಾ ಸೋಂಕು ಬೇರೆಯವರಿಗೆ ಹರಡುವ ಪ್ರಮಾಣ ಕಮ್ಮಿ ಅನ್ನೋದು ಬೆಳಕಿಗೆ ಬಂದಿದೆ. ಪಬ್ಲಿಕ್ ಹೆಲ್ತ್ ಇಂಗ್ಲೆಂಡ್​ ಅನ್ನೋ ಸಂಸ್ಥೆ ಈ ಅಧ್ಯಯನ ನಡೆಸಿದೆ. ಕೊರೋನಾ ಲಸಿಕೆಯ ಒಂದು ಡೋಸ್​ ಹಾಕಿಸಿಕೊಂಡ ಸುಮಾರು 57,000 ಜನರ ಮೇಲೆ ಅಧ್ಯಯನ ನಡೆದಿದೆ. ಈ ವೇಳೆ ಒಂದು ಡೋಸ್​ ಲಸಿಕೆಯು ಕೊರೋನಾ ಹರಡುವ ಪ್ರಮಾಣವನ್ನ ಸುಮಾರು 50 ಪರ್ಸೆಂಟ್​ನಷ್ಟು ಕಮ್ಮಿ ಮಾಡುತ್ತೆ ಅನ್ನೋದು ಗೊತ್ತಾಗಿದೆ. ಜೊತೆಗೆ ಎರಡೂ ಡೋಸ್​ ಲಸಿಕೆ ಹಾಕ್ಕೊಂಡ್ರೆ ಸೋಂಕು ಹರಡುವ ಪ್ರಮಾಣ ಮತ್ತಷ್ಟು ಕಮ್ಮಿಯಾಗಬಹುದು ಅಂತ ಅಧ್ಯಯನ ತಂಡ ಹೇಳಿದೆ. ಈ ಮೂಲಕ ಕೊರೋನಾ ಮಹಾಮಾರಿಯನ್ನ ಲಸಿಕೆ ಮೂಲಕ ಕಂಟ್ರೋಲ್​ಗೆ ತರಬಹುದು ಅನ್ನೋ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಅಂದ್ಹಾಗೆ ಈ ಅಧ್ಯಯನ ಹೇಗೆ ನಡೀತು ಅಂತ ಹೇಳ್ತೀವಿ.. ಬ್ರಿಟನ್​ನಲ್ಲಿ ಫೈಝರ್​-ಬಿಯೋನ್​ಟೆಕ್​​ ಲಸಿಕೆ ಅಥವಾ ಆಕ್ಸ್​​ಫರ್ಡ್​-ಆಸ್ಟ್ರಾಝೆನೆಕಾ ಲಸಿಕೆಯ ಒಂದು ಡೋಸ್​ ಪಡೆದ ಮೂರು ವಾರಗಳಲ್ಲಿ ಕೊರೋನಾ ದೃಢಪಟ್ಟವರ ಮೇಲೆ ಈ ಅಧ್ಯಯನ ನಡೆದಿದೆ. ಇಂತಹ ಸುಮಾರು 57 ಸಾವಿರ ಜನರ ಮೇಲೆ ಅಧ್ಯಯನ ನಡೆದಿದೆ. ಈ ವೇಳೆ ಫೈಝರ್​-ಬಿಯೋನ್​ಟೆಕ್​ ಲಸಿಕೆ ಮತ್ತು ಆಕ್ಸ್​​ಫರ್ಡ್-ಆಸ್ಟ್ರಾಝೆನೆಕಾ​ ಲಸಿಕೆ ಪಡೆದವರು 38 ಪರ್ಸೆಂಟ್​​ನಿಂದ 49 ಪರ್ಸೆಂಟ್​​ನಷ್ಟು ಕಮ್ಮಿ ಪ್ರಮಾಣದಲ್ಲಿ ತಮ್ಮ ಮನೆಯಲ್ಲಿದ್ದವರಿಗೆ ಸೋಂಕನ್ನು ಹರಡುವ ಸಾಧ್ಯತೆ ಇರುತ್ತೆ. ಅಂದ್ರೆ ಲಸಿಕೆ ಹಾಕಿಸಿಕೊಳ್ಳದವರು ಸೋಂಕನ್ನ ಹರಡುವ ಪ್ರಮಾಣ 100 ಪರ್ಸೆಂಟ್​ ಇದ್ದರೆ, ಲಸಿಕೆಯ ಮೊದಲ ಡೋಸ್​ ಹಾಕ್ಕೊಂಡೋರು 38ರಿಂದ 49 ಪರ್ಸೆಂಟ್​​ನಷ್ಟು ಮಾತ್ರ ಕೊರೋನಾವನ್ನ ತಮ್ಮ ಮನೆಯವರಿಗೆ ಹರಡುತ್ತಾರೆ ಅನ್ನೋದು ಈ ಅಧ್ಯಯನದ ಸಾರಾಂಶ. ಇದು ಕೇವಲ ಒಂದು ಡೋಸ್​ ಲಸಿಕೆಯ ಅಧ್ಯಯನ. ಎರಡೂ ಡೋಸ್​ ಹಾಕ್ಕೊಂಡ ಬಳಿಕ ಕೊರೋನಾ ಹರಡುವ ಪ್ರಮಾಣ ಮತ್ತಷ್ಟು ಕಮ್ಮಿಯಾಗಬಹುದು. ಈ ಸಂಬಂಧ ಮತ್ತಷ್ಟು ಅಧ್ಯಯನಗಳು ನಡೀತಿವೆ. ಈ ಅಧ್ಯಯನ ವರದಿಯನ್ನ ಸ್ವಾಗತಿಸಿರೋ ಬ್ರಿಟನ್ ಸರ್ಕಾರ, ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು ಅವರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಆಗ್ರಹಿಸಿದೆ.

-masthmagaa.com

Contact Us for Advertisement

Leave a Reply