ಜೆಫ್​ ಬೆಝೋಸ್ vs ಜೋ ಬೈಡೆನ್​: ಏನಿದು ಟ್ಯಾಕ್ಸ್ ಫೈಟ್?

masthmagaa.com:

ಅಮೆಜಾನ್.ಕಾಮ್​ ಕಂಪನಿಯ ಸಿಇಒ ಜೆಫ್​ ಬೆಝೋಸ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವೆ ನಡೀತಿದ್ದ ಟ್ಯಾಕ್ಸ್ ಫೈಟ್​ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಾಣ್ತಿದೆ. ಏನಿದು ಟ್ಯಾಕ್ಸ್ ಫೈಟ್​? ಅಂದ್ಹಾಗೆ ಅಮೆರಿಕದ ಅತಿದೊಡ್ಡ ರೀಟೇಲ್​ ಕಂಪನಿಯಾದ ಅಮೆಜಾನ್.ಕಾಮ್​ ಟ್ಯಾಕ್ಸ್ ರೆಕಾರ್ಡ್ ಅಷ್ಟು ಚೆನ್ನಾಗಿಲ್ಲ. ಕಂಪನಿಯು ಸರಿಯಾಗಿ ಟ್ಯಾಕ್ಸ್​ ಕಟ್ಟುತ್ತಿಲ್ಲ ಅನ್ನೋ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ, ಅಮೆರಿಕ ಕಾಂಗ್ರೆಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಟೀಕೆಗೂ ಗುರಿಯಾಗಿದೆ. ಅಂತಹ ಟೀಕಾಕಾರಲ್ಲಿ ಜೋ ಬೈಡೆನ್ ಕೂಡ ಒಬ್ರು ಅನ್ನೋದು ವಿಶೇಷ. ಬೈಡೆನ್ ಅಮೆರಿಕ ಅಧ್ಯಕ್ಷರಾಗೋಕೂ ಮುಂಚೆನೇ ಈ ಬಗ್ಗೆ ಮಾತನಾಡಿದ್ರು. 2020ರ ಮೇನಲ್ಲಿ ಮಾತನಾಡಿ​, ಅಮೆಜಾನ್.ಕಾಮ್​​ ಈಗಲಾದ್ರೂ ಟ್ಯಾಕ್ಸ್ ಕಟ್ಟೋದನ್ನ ಶುರು ಮಾಡ್ಬೇಕು ಅಂತ ಬಹಿರಂಗವಾಗೇ ಹೇಳಿದ್ದರು.

ಕಳೆದ ವಾರ ಬರೋಬ್ಬರಿ 2 ಟ್ರಿಲಿಯನ್ ಡಾಲರ್​​ನ ಇನ್​ಫ್ರಾಸ್ಟ್ರಕ್ಚರ್ ಅಥವಾ ಮೂಲಸೌಕರ್ಯ ಪ್ಲಾನ್ ಅನ್ನ ಘೋಷಣೆ ಮಾಡಿದ್ದರು ಬೈಡೆನ್. ಹಾಲಿ ಇರುವ 21 ಪರ್ಸೆಂಟ್​ ಕಾರ್ಪೊರೇಟ್​ ಟ್ಯಾಕ್ಸ್ ಅನ್ನ 28 ಪರ್ಸೆಂಟ್​​ಗೆ ಏರಿಸೋ ಮೂಲಕ ಈ ಯೋಜನೆಗೆ ಬೇಕಾದ ಹಣವನ್ನ ಸಂಗ್ರಹಿಸಲಾಗುತ್ತೆ ಅಂತಾನೂ ಬೈಡೆನ್ ಹೇಳಿದ್ರು. ಬೈಡೆನ್​ ಸರ್ಕಾರ ಕಾರ್ಪೊರೇಟ್ ಟ್ಯಾಕ್ಸ್ ಅನ್ನ ಜಾಸ್ತಿ ಮಾಡಿರೋದನ್ನ ಅಮೆಜಾನ್​.ಕಾಮ್ ಸಿಇಒ ಜೆಫ್​ ಬೆಝೋಸ್ ಬೆಂಬಲಿಸಿದ್ದಾರೆ. ಟ್ಯಾಕ್ಸ್ ಕಟ್ಟದೆ ಟೀಕೆಗೆ ಗುರಿಯಾಗಿದ್ದ ಕಂಪನಿಯ ಸಿಇಒ ಹೀಗೆ ಹೇಳಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಜೆಫ್​ ಬೆಝೋಸ್​ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ ಅನ್ನೋದು ಕೂಡ ಇಲ್ಲಿ ಇಂಟರೆಸ್ಟಿಂಗ್. ಪಕ್ಕಾ ಬ್ಯುಸಿನೆಸ್​ ಮೆಂಟಾಲಿಟಿ ಹೊಂದಿದ್ದ ಡೊನಾಲ್ಡ್ ಟ್ರಂಪ್​ ತಮ್ಮ ಅವಧಿಯಲ್ಲಿ ಅಮೆರಿಕದಲ್ಲಿ 35 ಪರ್ಸೆಂಟ್ ಇದ್ದ ಕಾರ್ಪೊರೇಟ್​ ಟ್ಯಾಕ್ಸ್ ಅನ್ನ 21 ಪರ್ಸೆಂಟ್​ಗೆ ಇಳಿಸಿದ್ದರು. ಇದೀಗ ಅದನ್ನ ಬೈಡೆನ್ 28 ಪರ್ಸೆಂಟ್​ಗೆ ಏರಿಸಿದ್ದಾರೆ. ಕಂಪನಿ ಲಾಸ್​ನಲ್ಲಿದ್ದ ಕಾರಣ 2017 ಮತ್ತು 2018ರಲ್ಲಿ ತೆರಿಗೆ ಕಟ್ಟಿರಲಿಲ್ಲ. 2019ರಲ್ಲಿ 162 ಮಿಲಿಯನ್ ಡಾಲರ್ ಟ್ಯಾಕ್ಸ್ ಮತ್ತು 2020ರಲ್ಲಿ 1.835 ಬಿಲಿಯನ್ ಡಾಲರ್​ನಷ್ಟು ಟ್ಯಾಕ್ಸ್ ಬಿದ್ದಿದೆ ಅಮೆಜಾನ್​.ಕಾಮ್​ ಮೇಲೆ.

-masthmagaa.com

Contact Us for Advertisement

Leave a Reply