ಟ್ವಿಟರ್​ ಮೇಲೆ ಈಗ ಮಹಿಳಾ ಆಯೋಗದ ಕೆಂಗಣ್ಣು! ಸುಮೋಟೋ ಕೇಸ್!

masthmagaa.com:

ಅಶ್ಲೀಲ ಕಂಟೆಂಟ್​ಗಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್​ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ – NCW ಸುಮೋಟೋ ಕೇಸ್​ ದಾಖಲಿಸಿಕೊಂಡಿದೆ. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರೋ ಟ್ವಿಟ್ಟರ್, ಮಕ್ಕಳ ಲೈಂಗಿಕ ಶೋಷಣೆಯನ್ನ ಟ್ವಿಟ್ಟರ್​ ಎಳ್ಳಷ್ಟೂ ಸಹಿಸಲ್ಲ., ಟ್ವಿಟ್ಟರ್ ನಿಯಮಗಳನ್ನ ಉಲ್ಲಂಘಿಸೋ ಅಂತಹ ಕಂಟೆಂಟ್​ಗಳನ್ನ ಹುಡುಕಿ ಅದನ್ನ ತೆಗೆದುಹಾಕುವ ನಮ್ಮ ಕೆಲಸ ಮುಂದುವರಿಸುತ್ತೇವೆ ಎಂದಿದೆ.
ಟ್ವಿಟ್ಟರ್​ನಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರ ಸೈಬರ್​ ಸೆಲ್​ ನಿನ್ನೆಯಷ್ಟೇ ಟ್ವಿಟ್ಟರ್​ ವಿರುದ್ಧ ದೂರು ದಾಖಲಿಸಿಕೊಂಡಿತ್ತು.
ಮತ್ತೊಂದುಕಡೆ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್​ ಫ್ಲಾಟ್​​ಫಾರ್ಮ್​ಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಹೊಸ ಐಟಿ ರೂಲ್ಸ್ ಚೆನ್ನಾಗಿದೆ ಅಂತ ಫೇಸ್​ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಹೇಳಿದ್ದಾರೆ. ಇನ್ನು ಟ್ವಿಟ್ಟರ್, ಫೇಸ್​ಬುಕ್​ನಂಥ ಸಾಮಾಜಿಕ ಜಾಲತಾಣಗಳು ಸರ್ಕಾರದ ಜೊತೆ ಜಟಾಪಟಿ ಹೊಂದಿರೋದು ಕೇವಲ ಭಾರತದ ಜೊತೆ ಮಾತ್ರವಲ್ಲ. ಹಲವು ದೇಶಗಳ ಜೊತೆ ಸಂಘರ್ಷ ನಡೀತಾ ಇದೆ. ಅದ್ರಲ್ಲಿ ರಷ್ಯಾ ಕೂಡ ಒಂದು. ಈ ಬಗ್ಗೆ ಮಾತನಾಡಿರೋ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಶ್ಚಿಮಾತ್ಯ ಸಾಮಾಜಿಕ ಜಾಲತಾಣಗಳು ರಷ್ಯಾ ಕಾನೂನನ್ನ ಪಾಲಿಸಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ. ಆದ್ರೆ ಅವುಗಳನ್ನ ಬ್ಯಾನ್ ಮಾಡೋ ಯಾವ ಉದ್ದೇಶವೂ ಇಲ್ಲ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply