5ನೇ ಜನರೇಶನ್‌ ಫೈಟರ್‌ ಜೆಟ್‌ ಅಭಿವೃದ್ಧಿಗೆ ಕೇಂದ್ರ ಸಮ್ಮತಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅಂತೂ ಇಂತು ಭಾರತದ ಸೇನೆಗೆ ಐದನೇ ಜನರೇಷನ್‌ ಯುದ್ಧವಿಮಾನಗಳನ್ನ ಕಾಣೋ ಸಂದರ್ಭ ಬರೋ ತರ ಕಾಣ್ತಿದೆ. ಭದ್ರತಾ ಕ್ಯಾಬಿನೇಟ್‌ ಕಮಿಟಿ‌ 5ನೇ ಜನರೇಷನ್‌ AMCA ಅಥವಾ ಅಡ್ವಾನ್ಸ್ಡ್‌ ಮೀಡಿಯಂ ಕಾಂಬ್ಯಾಟ್‌ ಏರ್‌ಕ್ರಾಫ್ಟ್‌ಗಳನ್ನ ಡಿಸೈನ್‌ ಮಾಡಿ ಅಭಿವೃದ್ಧಿ ಮಾಡೋ ಪ್ರಾಜೆಕ್ಟ್‌ಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. DRDOದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ ಈ ಸ್ಟೆಲ್ಥ್‌ ಅಂದ್ರೆ ರೆಡಾರ್‌ ಕಣ್ತಪ್ಪಿಸಿ ಹಾರಾಟ ನಡೆಸೋ ವಿಮಾನಗಳನ್ನ ತಯಾರಿಸಲಿದೆ. ಕ್ಯಾಬಿನೆಟ್‌ ಈ ಪ್ರಾಜೆಕ್ಟ್‌ಗಾಗಿ 15 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡೋಕೆ ಒಪ್ಪಿಗೆ ನೀಡಿದೆ. ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಹಾಗೂ ಖಾಸಗೀ ಸಂಸ್ಥೆಗಳ ಸಹಯೋಗದಲ್ಲಿ 5 ಬೇರೆ ಬೇರೆ ಪ್ರೋಟೋಟೈಪ್‌ಗಳನ್ನ ತಯಾರಿಸೋ ಗುರಿ ಹೊಂದಲಾಗಿದೆ. HAL ಕೂಡ ಈ ಪ್ರಾಜೆಕ್ಟ್‌ನಲ್ಲಿ ಭಾಗಿಯಾಗಲಿದೆ. ಮೊದಲ ಎರಡು ಸ್ಕ್ವಾಡ್ರಾನ್‌ಗಳಿಗೆ GE-414 ಇಂಜಿನ್‌ಗಳನ್ನ ಬಳಕೆ ಮಾಡೋ ಉದ್ದೇಶ ಇದ್ದು, 2030ರ ಹೊತ್ತಿಗೆ ಈ ವಿಮಾನಗಳು ಸೇನೆಗೆ ನಿಯೋಜನೆಗೊಳ್ಳೋ ಚಾನ್ಸಸ್‌ ಇದೆ. ಸಂಪೂರ್ಣ ದೇಶೀಯವಾಗಿ ಒಟ್ಟು ಸುಮಾರು 200 5th ಜನರೇಶನ್‌ ಫೈಟರ್‌ ಜೆಟ್‌ಗಳನ್ನ ನಿಯೋಜಿಸಿಕೊಳ್ಳೋಕೆ ಇಂಡಿಯನ್‌ ಆರ್ಮಿ ಪ್ಲಾನ್‌ ಮಾಡಿದೆ.

-masthmagaa.com

Contact Us for Advertisement

Leave a Reply