ಅಮೆರಿಕ: ಪ್ರಧಾನಿ ಮೋದಿಯನ್ನ ಸ್ವಾಗತಿಸಲು ಭಾರತೀಯ ಮೂಲದವ್ರಿಂದ ಅದ್ಧೂರಿ ಸಿದ್ಧತೆ

masthmagaa.com:

ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಅಂದ್ರೆ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಜೂನ್‌ 18ರಂದು ʻಭಾರತ ಏಕತಾ ದಿನʼದ ನಡಿಗೆ ಮೂಲಕ ಪ್ರಮುಖ 20 ನಗರಗಳಲ್ಲಿ ಮೋದಿಯವರಿಗೆ ಸ್ವಾಗತ ಕೋರಲು ಅಮೆರಿಕದಲ್ಲಿರುವ ಭಾರತೀಯ- ಅಮೆರಿಕನ್‌ ಸಮುದಾಯ ನಿರ್ಧರಿಸಿರೋದಾಗಿ ಹೇಳಿದೆ. ವಾಷಿಂಗ್ಟನ್‌ನ ರಾಷ್ಟ್ರೀಯ ಸ್ಮಾರಕದಿಂದ ಲಿಂಕನ್‌ ಸ್ಮಾರಕದವರೆಗೆ ಮೆರವಣಿಗೆ ನಡೆಯಲಿದೆ. ಇದನ್ನ ಭಾರತ ಏಕತಾ ದಿನ ಅಂತ ಕರೆಯಲಾಗಿದ್ದು, ಮೋದಿಯರನ್ನ ಸ್ವಾಗತಿಸಲಾಗುತ್ತೆ. ಇದೇ ರೀತಿ 20 ನಗರಗಳಲ್ಲಿ ಸ್ವಾಗತ ಮೆರವಣಿಗೆಗಳು ನಡೆಯಲಿವೆ ಅಂತ ಸಮುದಾಯದ ಮುಖಂಡ ಅಡಪ ಪ್ರಸಾದ್‌ ಹೇಳಿದ್ದಾರೆ. ಅಂದ್ಹಾಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಜಿಲ್‌ ಬೈಡೆನ್‌ ಆಹ್ವಾನದ ಮೇರೆಗೆ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಜೂನ್‌ 22ರಂದು ಬೈಡೆನ್‌ ದಂಪತಿ ಮೋದಿಗೆ ಔತಣಕೂಟ ಆಯೋಜಿಸಲಿದೆ.

-masthmagaa.com

Contact Us for Advertisement

Leave a Reply