ಚೀನಾದಲ್ಲಿನ ಕೊರೊನಾ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ ಅಮೆರಿಕ!

masthmagaa.com:

ಕೊರೊನಾ ಕಠಿಣ ನಿಯಮಗಳ ವಿರುದ್ದ ಚೀನಾ ಸರ್ಕಾರದ ವಿರುದ್ದ ಅಲ್ಲಿನ ಜನ ಪ್ರತಿಭಟನೆ ಮಾಡ್ತಿದಾರೆ. ಜನರ ಪ್ರತಿಭಟನೆಗೆ ಬಗ್ಗಿದ ಸರ್ಕಾರ ಇದೀಗ ಕೆಲ ನಿಯಮಗಳಲ್ಲಿ ಒಂದಿಷ್ಟು ಬದಲಾವಣೆ ಮಾಡೋಕೆ ಮುಂದಾಗಿದೆ. ಕಠಿಣ ರೂಲ್ಸ್‌ಗಳನ್ನ ಸಡಿಲ ಮಾಡೋಕೆ ಚೀನಾ ಸರ್ಕಾರ ಚಿಂತನೆ ನಡೆಸ್ತಿದೆ ಅಂತ ವರದಿಯಾಗಿದೆ. ಇತ್ತ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ವಿರುದ್ದ ಅಲ್ಲಿನ ಜನ ಮಾಡ್ತಿರೊ ಶಾಂತಿಯುತ ಪ್ರತಿಭಟನೆಗಳಿಗೆ ಅಮೆರಿಕ ತನ್ನ ಬೆಂಬಲ ವ್ಯಕ್ತಪಡಿಸಿದೆ. ಜನರಿಗೆ ಕಾನೂನು, ನೀತಿ ಹಾಗೂ ಅಧಿಕಾರಿಗಳ ವಿರುದ್ದ ಶಾಂತಿಯುತವಾಗಿ ಪ್ರತಿಭಟನೆ ಮಾಡೋಕೆ ಅವಕಾಶ ನೀಡಬೇಕು. ಚೀನಾದಲ್ಲಿ ನಡಿತಾಯಿರೊ ಪ್ರೋಟೆಸ್ಟ್‌ಗಳನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಾನಿಟರ್‌ ಮಾಡ್ತಿದಾರೆ ಅಂತ ವೈಟ್‌ಹೌಸ್‌ನ ಅಧಿಕಾರಿ ಜಾನ್‌ ಕಿರ್ಬಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply