ಭಾರತದ ಮೇಲೆ ದಾಳಿಗೆ ಕಾದಿದ್ದಾರೆ ಉಗ್ರರು: ಅಮೆರಿಕಾ ಎಚ್ಚರಿಕೆ

370ನೇ ವಿಧಿಯನ್ವಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ರದ್ದುಪಡಿಸಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಕಾದು ಕುಳಿತಿದ್ದಾರೆ. ಈ ಬಗ್ಗೆ ಗುಪ್ತಚರ ಇಲಾಖೆಗಳು ಮಾಹಿತಿ ನೀಡಿರುವ ಬೆನ್ನಲ್ಲೇ ಅಮೆರಿಕಾ ಕೂಡ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಕಾದು ಕುಳಿತಿದ್ದಾರೆ. ಆದ್ರೆ ಪಾಕಿಸ್ತಾನ ಉಗ್ರರನ್ನು ಹತೋಟಿಯಲ್ಲಿಟ್ಟರೆ ಈ ದಾಳಿಯನ್ನು ತಪ್ಪಿಸಬಹುದು ಎಂದು ಹೇಳಿದೆ.

ಈ ಬಗ್ಗೆ ವಾಷಿಂಗ್ಟನ್‍ನಲ್ಲಿ ಇಂಡೋಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಮಾತನಾಡಿದ್ರು. ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ ದೃಢ ನಿರ್ಧಾರ ಕೈಗೊಂಡ ಬಳಿಕ ಉಗ್ರರು ಗಡಿ ನುಸುಳಿ ದಾಳಿ ಮಾಡುವ ಸಾಧ್ಯತೆ ಇದೆ. ಆದ್ರೆ ಚೀನಾ ಇಂಥಹ ಕೃತ್ಯಗಳಿಗೆ ಬೆಂಬಲ ನೀಡುತ್ತೆ ಅಥವಾ ಇಂಥಹ ಸಂಘರ್ಷವನ್ನು ಬಯಸುತ್ತೆ ಅಂತ ನನಗೆ ಅನ್ನಿಸುತ್ತಿಲ್ಲ ಅಂತ ಹೇಳಿದ್ರು.

Contact Us for Advertisement

Leave a Reply