ಅಮೆರಿಕವೇ ದೊಡ್ಡಣ್ಣ ಅಂದುಕೊಂಡ್ರೆ ಅದನ್ನ ನಾವು ಒಪ್ಪಿಕೊಳ್ಳಲ್ಲ: ಚೀನಾ

masthmagaa.com:

ಅಮೆರಿಕ ಮತ್ತು ಚೀನಾ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಘರ್ಷ ನಡೀತಿರುವಾಗಲೇ, ಅಮೆರಿಕವನ್ನ ವಿಶ್ವದ ದೊಡ್ಡಣ್ಣ ಅಂತ ಕರೆಯೋಕೆ ಸಾಧ್ಯವಿಲ್ಲ ಅಂತ ಚೀನಾ ಹೇಳಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಮಾತನಾಡಿ, ನಮ್ಮ ಜೊತೆ ಮಾತುಕತೆ ನಡೆಸಲು ಅಮೆರಿಕಕ್ಕೆ ಬಾಗಿಲು ಓಪನ್ ಆಗಿದೆ. ಆದ್ರೆ ಮಾತುಕತೆಯಲ್ಲಿ ಎರಡೂ ದೇಶಗಳಿಗೆ ಸಮಾನ ಅವಕಾಶ ಇರಬೇಕು. ಜಗತ್ತಿನ ಇತರ ದೇಶಗಳಿಗೆ ನಾನೇ ದೊಡ್ಡಣ್ಣ ಅಂತ ಯಾವುದಾದ್ರೂ ದೇಶ ಹೇಳಿದ್ರೆ ಅದನ್ನ ಚೀನಾ ಒಪ್ಪಿಕೊಳ್ಳಲ್ಲ. ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದಾದ್ರೂ ಒಂದು ದೇಶ ಹೇಳಿದ್ದನ್ನ ಎಲ್ಲರೂ ಕೇಳೋಕೆ ಸಾಧ್ಯವಿಲ್ಲ ಅಂತ ಅಮೆರಿಕಕ್ಕೆ ವಾರ್ನ್ ಮಾಡಿದ್ಧಾರೆ.

-masthmagaa.com

Contact Us for Advertisement

Leave a Reply