ಸಲಿಂಗಿಗಳಿಗೆ ಅವ್ರ ಲೈಂಗಿಕ ಸಂಗಾತಿಗಳನ್ನ ಕಡಿಮೆ ಮಾಡುವಂತೆ WHO ಸೂಚನೆ!

masthmagaa.com:

ಮಂಕಿಪಾಕ್ಸ್‌ ಕೇಸ್‌ಗಳು ಜಗತ್ತಿನಾದ್ಯಂತ ಹೆಚ್ಚಾಗ್ತಿರೋ ಹಿನ್ನಲೆಯಲ್ಲಿ WHO, ಸಲಿಂಗಿಗಳಿಗೆ ಅವ್ರ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನ ಕಡಿಮೆ ಮಾಡಿ ಅಂತ ಹೇಳಿದೆ. ಅಧ್ಯಯನಗಳ ಪ್ರಕಾರ ವರದಿಯಾದ ಕೇಸ್‌ಗಳಲ್ಲಿ 95% ಕೇಸ್‌ಗಳು ಲೈಂಗಿಕ ಚಟುವಟಿಕೆಯಿಂದಾನೇ ಹರಡಿವೆ ಅಂತ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ WHO ಮುಖ್ಯಸ್ಥ ಟೆಡ್ರೋಸ್‌ ಗೆಬ್ರಿಯಾಸಿಸ್ ಈ ರೀತಿ ಹೇಳಿದ್ದಾರೆ. ಇನ್ನು ಅಮೆರಿಕ ಮತ್ತು ಯುರೋಪ್‌ಗಳೇ ಈ ಮಂಕಿಪಾಕ್ಸ್‌ಗೆ ಅತಿಯಾಗಿ ಗುರಿಯಾಗಿವೆ ಅಂತ ಹೇಳಿದ್ದಾರೆ. ಇನ್ನು ಇದುವರೆಗೂ 78 ರಾಷ್ಟ್ರಗಳಿಂದ 18 ಸಾವಿರಕ್ಕಿಂತ ಅಧಿಕ ಕೇಸ್‌ಗಳು ವರದಿಯಾಗಿವೆ. ಇದ್ರಲ್ಲಿ 70%ನಷ್ಟು ಕೇಸ್‌ಗಳು ಯುರೋಪ್‌ನಿಂದ ಹಾಗೂ 25% ಕೇಸ್‌ಗಳು ಅಮೆರಿಕಯಿಂದ ವರದಿಯಾಗಿವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply