ಭಾರತಕ್ಕೆ ಬರಲಿದೆಯೇ ಮಂಕಿಪಾಕ್ಸ್‌ ಲಸಿಕೆ? ಅದಾರ್‌ ಪೂನವಾಲಾ ಹೇಳಿದ್ದೇನು?

masthmagaa.com:

ದೇಶದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಒಂದೊಂದೆ ವರದಿಯಾಗ್ತಿದ್ದಂತೆ ಸೀರಮ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅದಾರ್‌ ಪೂನವಾಲಾ ಲಸಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ʻನಮ್ಮ ಕಂಪನಿಯ ಫಂಡನ್ನೇ ಬಳಸಿ ಡೆನ್ಮಾರ್ಕ್‌ನ ಸ್ಮಾಲ್‌ಪಾಕ್ಸ್‌ ಲಸಿಕೆಯನ್ನ ಖರೀದಿ ಮಾಡೋಕೆ ಮುಂದಾಗಿದ್ದೇವೆ. ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಇನ್ನು ಕೆಲವು ತಿಂಗಳಲ್ಲಿ ಲಸಿಕೆ ಭಾರತಕ್ಕೆ ಬರುತ್ತೆ. ಸದ್ಯಕ್ಕೆ ಕೆಲವು ಲಕ್ಷಗಳಷ್ಟು ಲಸಿಕೆಗಳನ್ನ ಸ್ಟಾಕ್‌ ಮಾಡಿ ಇಟ್ಕೊಬೇಕು. ನಾನು ನನ್ನ ಸ್ವಂತ ರಿಸ್ಕ್‌ನಲ್ಲಿ ಲಸಿಕೆಗಳನ್ನ ಆಮದು ಮಾಡಿಕೋಳ್ಳೋಕೆ ಮುಂದಾಗಿದ್ದೀನಿʼ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಡೆನ್ಮಾರ್ಕ್‌ನ ಸ್ಮಾಲ್‌ಪಾಕ್ಸ್‌ ಲಸಿಕೆಯನ್ನ ಮಂಕಿಪಾಕ್ಸ್‌ ಸೋಂಕಿನ ವಿರುದ್ದವೂ ಬಳಸೋಕೆ ಯುರೋಪಿಯನ್‌ ಒಕ್ಕೂಟ ಅನುಮತಿ ನೀಡಿದೆ.

-masthmagaa.com

Contact Us for Advertisement

Leave a Reply