ಆಸ್ಟ್ರಾಝೆನೆಕಾ ಲಸಿಕೆ ಪಡೆದ 7 ಮಂದಿ ಸಾವು.. ಒಪ್ಪಿಕೊಂಡ ಬ್ರಿಟನ್

masthmagaa.com:

ಆಕ್ಸ್​ಫರ್ಡ್ ಮತ್ತು ಆಸ್ಟ್ರಾಝೆನಕಾ ಲಸಿಕೆ ಹಾಕಿಸಿಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಹಲವು ದೇಶಗಳಲ್ಲಿ ಆಸ್ಟ್ರಾಝೆನೆಕಾ ಲಸಿಕೆ ಹಾಕೋದನ್ನೇ ಸ್ಥಗಿತಗೊಳಿಸಿದ್ವು. ಆದ್ರೆ ವಿಶ್ವಸಂಸ್ಥೆ, ಯುರೋಪಿಯನ್​ ಯೂನಿಯನ್ ಮತ್ತು ಆಸ್ಟ್ರಾಝೆನೆಕಾ ಕಂಪನಿ ತಮ್ಮ ಲಸಿಕೆ ಸೇಫ್​ ಅಂತ ಹೇಳಿದ ಬೆನ್ನಲ್ಲಿ ಕೆಲವೊಂದು ದೇಶಗಳಲ್ಲಿ ಆಸ್ಟ್ರಾಝೆನೆಕಾ ಲಸಿಕೆಯನ್ನ ಹಾಕೋದನ್ನ ಮತ್ತೆ ಶುರು ಮಾಡಲಾಗಿತ್ತು. ಇದರ ನಡುವೆಯೇ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಲಸಿಕೆ ಬ್ರಿಟನ್​ದು. ಆದ್ರೀಗ ಅದೇ ಬ್ರಿಟನ್​ ಈ ಲಸಿಕೆ ಪಡೆದ ಬಳಿಕ 30 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡಪರಿಣಾಮ ಕಾಣಿಸಿಕೊಂಡಿದ್ದು, ಅದರಲ್ಲಿ 7 ಜನ ಮೃತಪಟ್ಟಿದ್ದಾರೆ ಅಂತ ಹೇಳಿದೆ. ಇದರಿಂದ ಈ ಲಸಿಕೆ ಮೇಲಿನ ಅನುಮಾನ ಮತ್ತಷ್ಟು ಜಾಸ್ತಿಯಾಗಿದೆ.

-masthmagaa.com

Contact Us for Advertisement

Leave a Reply