ಯೆಲ್ಲೋ ಫಂಗಸ್ ಬಗ್ಗೆ ಸಂಪೂರ್ಣ ಮಾಹಿತಿ!

masthmagaa.com:

ದೇಶದಲ್ಲಿ ದಿನಕ್ಕೊಂದು ವಿಚಿತ್ರ ಕಾಯಿಲೆಗಳ ಬಗ್ಗೆ ವರದಿಯಾಗ್ತಾ ಇದೆ. ಈಗಾಗಲೇ ದೇಶದಲ್ಲಿ ಒಟ್ಟು 10 ಸಾವಿರ ಮಂದಿಯಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಇದೀಗ ಬ್ಲಾಕ್​, ವೈಟ್ ಬಳಿಕ ಈಗ ಯೆಲ್ಲೋ ಫಂಗಸ್ ಬಗ್ಗೆ ಸುದ್ದಿ ಬರ್ತಾ ಇದೆ. ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ 45 ವರ್ಷದ ವ್ಯಕ್ತಿಯೊಬ್ಬರಲ್ಲಿ ಹಳದಿ ಫಂಗಸ್ ಪತ್ತೆಯಾಗಿದೆ ಅಂತ ಇಎನ್​ಟಿ ಅಂದ್ರೆ ಕಿವಿ ಮೂಗು ಗಂಟಲು ಸ್ಪೆಷಲಿಸ್ಟ್​ ಬಿಪಿ ತ್ಯಾಗಿ ಹೇಳಿದ್ಧಾರೆ. ಅದೇ ಪೇಶೆಂಟ್​​ನಲ್ಲಿ ಬ್ಲಾಕ್ ಮತ್ತು ವೈಟ್ ಫಂಗಸ್ ಲಕ್ಷಣಗಳು ಕೂಡ ಕಂಡು ಬಂದಿವೆ ಅಂತಲೂ ಮಾಹಿತಿ ನೀಡಿದ್ಧಾರೆ. ಆಲಸ್ಯ, ಹಸಿವಾಗದೇ ಇರೋದು, ವೇಯ್ಟ್​ ಲಾಸ್​​​​, ಗಾಯಗಳು ಗುಣವಾಗಲು ಬಹಳ ಸಮಯ ತಗೊಳ್ಳೋದು, ಅಪೌಷ್ಟಿಕತೆ, ಕಣ್ಣು ಒಳಗೆ ಹೋದಂಗೆ ಕಾಣೋದು ಹಳದಿ ಫಂಗಸ್ ಲಕ್ಷಣ. ಇದು ಒಳಂಗಿದೊಳಗೇ ವೃದ್ಧಿಯಾಗೋ ಫಂಗಸ್ ಆಗಿದ್ದು, ಲಕ್ಷಣಗಳನ್ನು ಬೇಗನೇ ಗಮನಿಸಿದ್ರೆ ಚಿಕಿತ್ಸೆ ಸುಲಭವಾಗುತ್ತೆ. ಅಂಫೋಟೆರಸಿನ್​​​ನ್ನು ಇದರ ಚಿಕಿತ್ಸೆಗೆ ಬಳಸಬಹುದು ಅಂತ ಕೆಪಿ ತ್ಯಾಗಿ ತಿಳಿಸಿದ್ದಾರೆ. ಇದ್ರ ವಿರುದ್ಧ ಹೋರಾಡ್ಬೇಕಾದ್ರೆ ತುಂಬಾ ಸ್ವಚ್ಛತೆ ಅಗತ್ಯ.. ಸ್ವಚ್ಛವಿಲ್ಲದ ಪರಿಸರ ಮತ್ತು ತೇವಾಂಶದಲ್ಲಿ ಈ ಶಿಲೀಂಧ್ರ ಬೆಳೆಯುತ್ತೆ ಅಂತ ಹೇಳಿದ್ರು. ಆದ್ರೆ ಘಾಜಿಯಾಬಾದ್ ಚೀಫ್ ಮೆಡಿಕಲ್ ಅಧಿಕಾರಿ ಎನ್​​ಕೆ ಗುಪ್ತಾ ಮಾತ್ರ ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಅಂತ ಹೇಳಿದ್ಧಾರೆ. ಇನ್ನು ಇವತ್ತು ಸಂಜೆ ದೇಶದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮಾಹಿತಿ ನೀಡುವಾಗ ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಈ ಬಗ್ಗೆ ಮಾಹಿತಿ ನೀಡಿದ್ರು. ಕೊರೋನಾ ರೋಗಿಗಳಲ್ಲಿ ಕಂಡು ಬರುತ್ತಿರೋ ಫಂಗಸ್​​​​​​​ಗೆ ಬೇರೆ ಬೇರೆ ಪದಗಳನ್ನು ಬಳಸಲಾಗ್ತಿದೆ. ಇದು ಜನರನ್ನು ತಪ್ಪುದಾರಿಗೆಳೆಯುವ, ಗೊಂದಲ ಸೃಷ್ಟಿಸುವ ಸಾಧ್ಯತೆ ಇರುತ್ತೆ ಅಂತ ಹೇಳಿದ್ದಾರೆ. ಒಂದೇ ಫಂಗಸ್​​​​​ಗೆ ಅದರ ಬಣ್ಣ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಹೆಸರಿಡೋದು ಗೊಂದಲ ಹುಟ್ಟಿಸುತ್ತೆ ಎಂದಿದ್ದಾರೆ.

ಜೊತೆಗೆ ರಣದೀಪ್ ಗುಲೇರಿಯಾ ಮೂರು ಫಂಗಸ್​​ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಲವಾರು ರೀತಿಯ ಫಂಗಸ್ ಇದ್ದು, ಅದ್ರಲ್ಲಿ ಮ್ಯೂಕೋರ್​ಮೈಕೋಸಿಸ್​​​, ಕ್ಯಾಂಡಿಡಾ ಮತ್ತು ಅಸ್ಪೆರ್​​ಜಿಲ್ಲೋಸಿಸ್ ಬಂದಿರೋ ರೋಗಿಗಳು ಹೆಚ್ಚಾಗಿ ಕಾಣ ಸಿಗ್ತಾರೆ. ಅದ್ರಲ್ಲಿ ಮ್ಯೂಕೋರ್​​ಮೈಕೋಸಿಸ್ ಅಂದ್ರೆ ಬ್ಲ್ಯಾಕ್ ಫಂಗಸ್​​. ಕೊರೋನಾ ಚಿಕಿತ್ಸೆಗೆ ಸ್ಟಿರಾಯ್ಡ್​ ನೀಡಿದಾಗ ಮತ್ತು ಡಯಾಬಿಟಿಕ್ಸ್ ಪೇಶೆಂಟ್​​ಗಳಲ್ಲಿ ಇದು ಜಾಸ್ತಿ ಪತ್ತೆಯಾಗ್ತಿದೆ. ಇದು ಸಾಮಾನ್ಯವಾಗಿ ಸೈನಸ್​, ಮೂಗು ನಂತರದಲ್ಲಿ ಮೆದುಳಿಗೂ ಹರಡೋ ಸಾಧ್ಯತೆ ಇರುತ್ತೆ. ಕೆಲವು ಪ್ರಕರಣಗಳಲ್ಲಿ ಶ್ವಾಸಕೋಶಗಳಲ್ಲೂ ಕಂಡು ಬರುತ್ತೆ ಅಂತ ಹೇಳಿದ್ದಾರೆ.

ಮತ್ತೊಂದು ಹೆಚ್ಚಾಗಿ ಕಂಡು ಬರೋ ಫಂಗಸ್ ಅಂದ್ರೆ ಅದು ಕ್ಯಾಂಡಿಡಾ.. ಇದು ರೋಗ ನಿರೋಧಕ ಶಕ್ತಿ ಕಡಿಮೆ ಇರೋರಲ್ಲಿ ಕಂಡು ಬರುತ್ತೆ. ಸಾಮಾನ್ಯವಾಗಿ ಬಾಯಿ, ಆಹಾರ ನಳಿಕೆಯಲ್ಲಿ ಬಿಳಿ ಬಿಳಿ ಕಲೆಯ ಜೊತೆಗೆ ಹೋಲ್ ಆಗುತ್ತೆ. ನಾಲಗೆ ಕೂಡ ಬಿಳಿ ಬಣ್ಣಕ್ಕೆ ತಿರುಗುತ್ತೆ. ಪ್ರೈವೇಟ್ ಪಾರ್ಟ್, ರಕ್ತ, ಚರ್ಮ, ಕಿಡ್ನಿ, ಹೊಟ್ಟೆ, ಕಿಡ್ನಿ ಮತ್ತು ಮೆದುಳಿಗೂ ಹರಡೋ ಸಾಧ್ಯತೆ ಇರುತ್ತೆ. ಇದನ್ನೇ ಇತ್ತೀಚಿನ ದಿನಗಳಲ್ಲಿ ವೈಟ್ ಫಂಗಸ್ ಅಂತ ಕರೆಯಲಾಗ್ತಾ ಇದೆ. ಆದ್ರೆ ಇದು ಬ್ಲಾಕ್​ಫಂಗಸ್​​ನಷ್ಟು ಡೇಂಜರಸ್ ಅಲ್ಲ ಅಂತ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಅಸ್ಪೆರ್​​ಗಿಲ್ಲೋಸಿಸ್​​​ ಹೆಚ್ಚಾಗಿ ಕಾಣಸಿಗೋ ಮತ್ತೊಂದು ಫಂಗಸ್​​.. ಇದು ಶ್ವಾಸಕೋಶಕ್ಕೆ ಹರಡಿ, ಅಲೆರ್ಜಿಕ್ ರಿಯಾಕ್ಷನ್ ಉಂಟಾಗೋ ಸಾಧ್ಯತೆ ಇರುತ್ತೆ ಅಂತ ಏಮ್ಸ್ ಮುಖ್ಯ ಹೇಳಿದ್ದಾರೆ.

ಅಂದ್ರೆ ವೈಟ್ ಫಂಗಸ್, ಯೆಲ್ಲೋ ಫಂಗಸ್​..ಇದು ಬ್ಲಾಕ್​ಫಂಗಸ್​​​ಗಿಂತ ಡೇಂಜರ್.. ಹಂಗೆ ಹಿಂಗೆ ಅಂತ ವರದಿ ಬಂದ್ರೆ ನಂಬಬೇಡಿ.. ಸದ್ಯ ಹೆಚ್ಚಾಗಿ ಕಾಣ್ತಿರೋದು ಈ ಮೂರು ಫಂಗಸ್ ಮಾತ್ರ.. ಇವುಗಳ್ಯಾವುದೂ ಬ್ಲಾಕ್​ಫಂಗಸ್​​ಗಿಂತ ಡೇಂಜರ್ ಅಲ್ಲ ಅಂತ ಹೇಳಿದ್ದಾರೆ. ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ…

-masthmagaa.com

Contact Us for Advertisement

Leave a Reply