ಭಾರತದ ಗಡಿಯಲ್ಲಿ 300 ಉಗ್ರರು: 30 ಉಗ್ರರು ಈಗಾಗಲೇ ಒಳಗೆ!

masthmagaa.com:

ತಾಲಿಬಾನ್ ಟೇಕೋವರ್ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯ ಭೀತಿ ಎದುರಾಗಿದೆ. ಕನಿಷ್ಠ 25ರಿಂದ 30 ಉಗ್ರರ 6 ಗುಂಪುಗಳು ಗಡಿಯಲ್ಲಿ ನುಸುಳಿದ್ದು, ದೊಡ್ಡ ಮಟ್ಟದ ದಾಳಿಗೆ ಪ್ಲಾನ್ ಮಾಡ್ತಿದ್ದಾರೆ ಅಂತ ಗುಪ್ತಚರ ಇಲಾಖೆ ಎಚ್ಚರಿಸಿದೆ. ಕಳೆದೊಂದು ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಜಾಸ್ತಿಯಾಗಿದೆ. ಕಳೆದೊಂದು ತಿಂಗಳಲ್ಲಿ ಪ್ರತಿದಿನವೂ ಭದ್ರತಾ ಸಿಬ್ಬಂದಿ ಅಥವಾ ರಾಜಕೀಯ ನಾಯಕರ ಮೇಲೆ ದಾಳಿಯ ಘಟನೆಗಳು ವರದಿಯಾಗಿವೆ. ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಉಲ್ಲಂಘನೆಯಾದ ಬಳಿಕ ಕಡಿಮೆಯಾಗಿದ್ದ ಉಗ್ರ ಚಟುವಟಿಕೆಗಳು ಈಗ ಜಾಸ್ತಿಯಾಗಿವೆ. ಲೈನ್ ಆಫ್ ಕಂಟ್ರೋಲ್ ಉದ್ದಕ್ಕೂ ಸುಮಾರು 300 ಉಗ್ರರು ಮತ್ತೆ ಬಂದು ತಮ್ಮ ಕ್ಯಾಂಪ್​ಗಳಲ್ಲಿ ಸೇರಿಕೊಂಡಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನ ಟೇಕೋವರ್ ಮಾಡಿದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರಚೋದನಾತ್ಮಕ ವಿಡಿಯೋ ಮತ್ತು ಸಂದೇಶಗಳು ಹರಿದಾಡ್ತಿವೆ. ಇತ್ತೀಚೆಗಷ್ಟೇ ತಾಲಿಬಾನ್ ಪರ ಹೋರಾಟಕ್ಕೆ ಹೋಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದ ಯುವಕರನ್ನು ಹೀರೋಗಳ ರೀತಿ ವೆಲ್​ಕಮ್ ಮಾಡಿರೋ ವಿಡಿಯೋ ವೈರಲ್ ಆಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಒಂದು ವಿಷ್ಯ ಅಂದ್ರೆ ಜಮ್ಮು ಕಾಶ್ಮೀರದಲ್ಲಿ ಕಳೆದ ಕೆಲ ತಿಂಗಳಲ್ಲಿ 60 ಮಂದಿ ನಾಪತ್ತೆಯಾಗಿದ್ದಾರೆ. ಕೆಲಸಕ್ಕೆ ಹೋಗ್ತೀವಿ ಅಂತ ಹೋದವರು ಇನ್ನೂ ಬಂದಿಲ್ಲ.. ಹೀಗಾಗಿ ಇವರೆಲ್ಲಾ ಹೋಗಿ ಭಯೋತ್ಪಾದಕ ಸಂಘಟನೆ ಸೇರಿದ್ದಾರಾ ಅನ್ನೋ ಅನುಮಾನ ಮೂಡಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಜಮ್ಮು ಕಾಶ್ಮೀರದ ಪೂಂಚ್​ ವಲಯದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಅಂತ ಸೇನೆ ಮಾಹಿತಿ ನೀಡಿದೆ. ಮತ್ತೊಂದ್ಕಡೆ ಭಾರತದ ಸೇನೆ 2 ಆಕಾಶ್ ಎಸ್​​​ ಏರ್​ ಡಿಫೆನ್ಸ್​ ಸಿಸ್ಟಂ ಮತ್ತು 25 ಲೈಟ್​​​ ಹೆಲಿಕಾಪ್ಟರ್​​ಗಳ ಖರೀದಿ ಸಂಬಂಧಿತ 14 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಯನ್ನು ರಕ್ಷಣಾ ಇಲಾಕೆ ಮುಂದಿಟ್ಟಿದೆ.

ಅಫ್ಘಾನಿಸ್ತಾನದಲ್ಲಿನ ಸದ್ಯದ ಬೆಳವಣಿಗೆಗಳು ಭಾರತದಲ್ಲಿ ಭದ್ರತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಂಜಾಬ್​ನಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಭಾರತದ ಗಡಿಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಲು ನಾವು ಬಿಡಲ್ಲ. ಕೇಂದ್ರ ಸರ್ಕಾರ ಅಲರ್ಟ್​ ಆಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿದೆ ಅಂತ ಹೇಳಿದ್ರು.

ಭಾರತ ಮತ್ತು ಪಾಕಿಸ್ತಾನದ ತಮ್ಮ ಆಂತರಿಕ ಕಾದಾಟಕ್ಕೆ ಅಫ್ಘಾನಿಸ್ತಾನವನ್ನು ಎಳೆಯಬೇಡಿ ಅಂತ ತಾಲಿಬಾನಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಫ್ಘಾನಿಸ್ತಾನದ ಭಾವಿ ವಿದೇಶಾಂಗ ಸಚಿವ ಶೇರ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್ ಝೈ, ಭಾರತ ಮತ್ತು ಪಾಕಿಸ್ತಾನ ತಮ್ಮ ಆಂತರಿಕ ವಿವಾದಕ್ಕೆ ಅಫ್ಘಾನಿಸ್ತಾನವನ್ನು ಎಳೆಯೋದಿಲ್ಲ ಅಂತ ನಂಬಿದ್ದೇವೆ. ಭಾರತ-ಪಾಕ್ ದೀರ್ಘವಾದ ಗಡಿಯನ್ನು ಹಂಚಿಕೊಂಡಿವೆ. ಅವರು ಗಡಿಯಲ್ಲಿ ಹೊಡೆದಾಡಿಕೊಳ್ಳಬಹುದು. ಆದ್ರೆ ಅದಕ್ಕಾಗಿ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು. ಈ ಉದ್ದೇಶಕ್ಕೆ ಯಾವುದೇ ದೇಶಕ್ಕೂ ಅಫ್ಘಾನಿಸ್ತಾನದ ನೆಲ ಬಳಸಿಕೊಳ್ಳಲು ನಾವು ಬಿಡಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply