ಭಾರತ-ಚೀನಾ ಗಡಿಯಲ್ಲಿ ʻಪ್ರಳಯʼ ಮಾಡೋಕೆ ರೆಡಿಯಾದ ಭಾರತೀಯ ವಾಯುಪಡೆ! ಕಾರಣವೇನು?

mathmagaa.com:

ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರೋ ನಡುವೆಯೇ ಭಾರತೀಯ ವಾಯುಸೇನೆ ಈಶಾನ್ಯ ಪ್ರದೇಶದಲ್ಲಿರೋ ತನ್ನ ಪ್ರಮುಖ ವಾಯುನೆಲೆಯಲ್ಲಿ ಸಮರಾಭ್ಯಾಸ ನಡೆಸೋದಾಗಿ ಹೇಳಿದೆ. ಇತ್ತೀಚೆಗೆ ಗಡಿಯಲ್ಲಿ ನಿಯೋಜಿಸಲಾದ S-400 ಏರ್‌ ಡಿಫೆನ್ಸ್‌ ಸ್ಕ್ವಾಡ್ರನ್‌ ಒಳಗೊಂಡ ʻಪ್ರಳಯ್‌ʼ ಹೆಸರಿನ ಸಮರಾಭ್ಯಾಸ ನಡೆಸಲಾಗುತ್ತೆ. ಈ ಸಮರಾಭ್ಯಾಸದಲ್ಲಿ ರಫೇಲ್‌ ಮತ್ತು Su-30 ಯುದ್ಧ ವಿಮಾನಗಳೂ ಪಾಲ್ಗೊಳ್ಳಲಿವೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಚೀನಾ, ತವಾಂಗ್ ಗಡಿಯಲ್ಲಿ ಕ್ಯಾತೆ ತೆಗೆದ ಬಳಿಕ ವಾಯುಸೇನೆ ನಡೆಸ್ತಿರೋ ಎರಡನೇ ಸಮರಾಭ್ಯಾಸ ಇದಾಗಿದೆ.‌ ಅಂದ್ಹಾಗೆ ನೆನ್ನೆಯಷ್ಟೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಎಲ್‌ಎಸಿ ಬಳಿಯಿರೋ ತಮ್ಮ ಸೇನೆಯೊಂದಿಗೆ ಯುದ್ಧ ಸನ್ನದ್ಧತೆ ಕುರಿತು ಮಾತುಕತೆ ನಡೆಸಿದ್ರು. ಅದ್ರ ಬೆನ್ನಲ್ಲೇ ಭಾರತ ಈ ಸಮರಾಭ್ಯಾಸ ಮಾಡೋದಾಗಿ ಅನೌನ್ಸ್‌ ಮಾಡಿದ್ದು, ಚೀನಾಗೆ ಟಕ್ಕರ್‌ ಕೊಡೋಕೆ ಸಿದ್ಧವಾಗ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply