ಜಮ್ಮು ಕಾಶ್ಮೀರದಲ್ಲಿ ರಕ್ಷಣಾ ಕವಚವನ್ನೇ ತೆಗೆಸಿದ ಅಮಿತ್ ಶಾ!

masthmagaa.com:

ಜಮ್ಮು ಕಾಶ್ಮೀರ ಪ್ರವಾಸದಲ್ಲಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೇಥ್ಪೋರಾದಲ್ಲಿರೋ CRPF ಕ್ಯಾಂಪ್ ಗೆ ಭೇಟಿ ನೀಡಿದ್ದಾರೆ. ರಾತ್ರಿ ಅಲ್ಲೇ ತಂಗಿ ಸೈನಿಕರೊಂದಿಗೆ ಡಿನ್ನರ್ ಕೂಡ ಮಾಡಲಿದ್ದಾರೆ. ಇದಕ್ಕೂ ಮೊದಲು ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ ಹಾಗೂ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಭಾಗಿಯಾದ್ರು. ಈ ವೇಳೆ ಮನೋಜ್ ಸಿನ್ಹಾ ಬುಲೆಟ್ ಪ್ರೂಫ್ ಶೀಲ್ಡ್ ಅನ್ನ ತೆಗೆಸಿಹಾಕಿದ್ರು. ಅಮಿತ್ ಶಾ ಮಾತನಾಡಿ, ನಾನು ಕಾಶ್ಮೀರದ ಯುವಕರೊಂದಿಗೆ ಮುಕ್ತವಾಗಿ ಮಾತನಾಡಲು ಬಯಸ್ತೀನಿ. ಹೀಗಾಗಿ ಇಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಇಲ್ಲ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply