370 ರದ್ದು..ಯೋಧರಿಗೆ `ನಮೋ’ ಸಲ್ಲಿಸಿದ ಗೌರವ: ಅಮಿತ್ ಶಾ

370ನೇ ವಿಧಿ ರದ್ದು ಮಾಡಿದ್ದು ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಮೋದಿ ಸಲ್ಲಿಸಿದ ಗೌರವ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದ ಕ್ಷಿಪ್ರ ಕಾರ್ಯಪಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಅಲ್ಲದೆ ಇನ್ಮುಂದೆ ಯಾವ ಯೋಧರೂ ಆ ಭೂಮಿಯಲ್ಲಿ ಹುತಾತ್ಮರಾಗಬಾರದು ಎಂಬ ಕಾರಣಕ್ಕೆ 370 ರದ್ದುಗೊಳಿಸಲಾಯ್ತು ಎಂದಿದ್ದಾರೆ. ಸ್ವಾತಂತ್ರ್ಯ ಬಂದ ಕಳೆದ 70 ವರ್ಷಗಳಲ್ಲಿ ಯಾವುದೇ ಸರ್ಕಾರ ಯೋಧರಿಗೆ ಗೌರವ ಸಲ್ಲಿಸೋ ಬಗ್ಗೆ ಚಿಂತಿಸಲೂ ಇಲ್ಲ ಅಂತ ಕಿಡಿಕಾರಿದ್ರು. 2ನೇ ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ದೇಶಕ್ಕಾಗಿ ನಾವು ಮಾಡಿದ ಮೊದಲ ಕೆಲಸ ಅಂದ್ರೆ ಅದು 370ನೇ ವಿಧಿ ರದ್ದತಿ. ಈ ಮೂಲಕ ಕಾಶ್ಮೀರದಲ್ಲಿ ಇನ್ಮುಂದೆ ಅಭಿವೃದ್ಧಿ ಶುರುವಾಗುತ್ತೆ. ಯಾರಾದರೂ ಅಶಾಂತಿ ಕದಡಲು ಯತ್ನಿಸಿದ್ರೆ, ಅಲ್ಲಿ ನಮ್ಮ ಯೋಧರು ಕಾವಲಿಗೆ ನಿಂತಿದ್ದಾರೆ ಅನ್ನೋದನ್ನ ನೆನಪಿನಲ್ಲಿ ಇಡಲಿ ಎಂದು ಎಚ್ಚರಿಸಿದ್ದಾರೆ.

Contact Us for Advertisement

Leave a Reply