ಅಮಿತ್ ಶಾಗೆ ಕೊರೋನಾ ಪರೀಕ್ಷೆ ನಡೆಸಿಲ್ಲ: ಕೇಂದ್ರ ಗೃಹ ಇಲಾಖೆ

masthmagaa.com:

ಕೊರೋನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ್ ಅಮಿತ್​ ಶಾಗೆ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಅಂತ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಆದ್ರೀಗ ಅಮಿತ್ ಶಾಗೆ ಕೊರೋನಾ ಪರೀಕ್ಷೆ ನಡೆಸಿಲ್ಲ ಅಂತ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ. ಅಂದ್ರೆ ಅವರಿನ್ನೂ ಗುಣಮುಖರಾಗಿಲ್ಲ ಅಂತ ಹೇಳಿದೆ.

ಅಮಿತ್ ಶಾ ಅವರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಅಂತ ಟ್ವೀಟ್ ಮಾಡಿದ್ದ ಮನೋಜ್ ತಿವಾರಿ ವಿರುದ್ಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಮೀಮ್ಸ್ ಹರಿದಾಡ್ತಿವೆ. ಇದರ ಬೆನ್ನಲ್ಲೇ ಮನೋಜ್ ತಿವಾರಿ ತಾವು ಮಾಡಿದ್ದ ಟ್ವೀಟ್​ ಅನ್ನು ಡಿಲಿಟ್ ಮಾಡಿದ್ದಾರೆ. ವಾರದ ಹಿಂದಷ್ಟೇ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ 55 ವರ್ಷ ವಯಸ್ಸಿನ ಅಮಿತ್ ಶಾ ಅವರನ್ನು ಗುರುಗ್ರಾಮದ ಮೇದಾಂತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಕಳೆದ ಕೆಲ ದಿನಗಳಲ್ಲಿ ಬಿಜೆಪಿಯ ಹಲವು ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪ, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸೇರಿದಂತೆ ಹಲವರಿಗೆ ಸೋಂಕು ತಗುಲಿತ್ತು. ಇದರಲ್ಲಿ ಕೆಲವರು ಗುಣಮುಖರಾದ್ರೆ, ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply