ಅಮಿತಾಬ್ ಬಚ್ಚನ್ ಡಿಸ್ಚಾರ್ಜ್​​..37 ವರ್ಷಗಳ ಹಿಂದೆ ಏನಾಗಿತ್ತು ಗೊತ್ತಾ..?

ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ 4 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.  ರೊಟೀನ್ ಚೆಕಪ್​​ಗಾಗಿ ಮಂಗಳವಾರ ಮಧ್ಯಾಹ್ನ 2 ಗಂಟೆ ವೇಳೆ ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅಂದ್ರೆ ಶುಕ್ರವಾರ ರಾತ್ರಿ 9.45ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಮಿತಾಬ್ ಅವರನ್ನು ಪುತ್ರ ಅಭಿಷೇಕ್ ಬಚ್ಚನ್, ಪತ್ನಿ ಜಯಾ ಬಚ್ಚನ್  ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದಾರೆ. ಅಮಿತಾಬ್ ಬಚ್ಚನ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಆಗಾಗ್ಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ ಅಮಿತಾಬ್ ಬಚ್ಚನ್ ಆರಾಮಾಗಿದ್ದಾರೆ. ಅವರು ರೊಟೀನ್ ಚೆಕಪ್​ಗಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುತ್ತಾರೆ ಎಂದಿದ್ದಾರೆ.

2012ರಲ್ಲಿ ಸರ್ಜರಿಗಾಗಿ 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಬ್ ಬಚ್ಚನ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 1982ರಲ್ಲಿ ಶೂಟಿಂಗ್ ವೇಳೆ ಅಮಿತಾಬ್ ಬಚ್ಚನ್ ಅವರಿಗೆ ಗಾಯವಾಗಿತ್ತು. ಕೂಲಿ ಸಿನಿಮಾದ ಶೂಟಿಂಗ್ ವೇಳೆ ನಡೆದ ಈ ಅಪಘಾತದಲ್ಲಿ ಅಮಿತಾಬ್ ಬಚ್ಚನ್ ಬದುಕಿದ್ದೇ ಒಂದು ಪವಾಡವಾಗಿತ್ತು. ಘಟನೆಯಲ್ಲಿ ತುಂಬಾ ರಕ್ತ ಹೋಗಿದ್ದರಿಂದ ಅವರಿಗೆ 200 ರಕ್ತದಾನಿಗಳ ಮೂಲಕ 60 ಬಾಟಲಿ ರಕ್ತವನ್ನು ನೀಡಲಾಗಿತ್ತು. ಆದ್ರೆ ಅವರಲ್ಲಿ ಒಬ್ಬರಿಗೆ ಹೆಪಟೈಟಸ್ ಕಾಯಿಲೆ ಇತ್ತು. ಹೀಗಾಗಿ 2000ನೇ ಇಸವಿಯಲ್ಲಿ ಅಮಿತಾಬ್ ಬಚ್ಚನ್​​ ದೈನಂದಿನ ಚೆಕಪ್ ವೇಳೆ ತಮ್ಮ ಲಿವರ್​ಗೂ ಎಫೆಕ್ಟ್​ ಆಗಿರೋದು ಬೆಳಕಿಗೆ ಬಂದಿತ್ತು.

 

Contact Us for Advertisement

Leave a Reply