ಡೆತ್ ಬೆಡ್ ಮೇಲೆ ಮಲಗಿದ್ದ ಅಮಿತಾಬ್ ಬಚ್ಚನ್ ಬದುಕಿ ಉಳಿದ ಕಥೆ!

masthmagaa.com:

ಅಮಿತಾಬ್‌ ಬಚ್ಚನ್‌ ಮತ್ತು ಜಯಾ ಬಚ್ಚನ್‌ ತಮ್ಮ 50ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೋಳ್ತಾ ಇದಾರೆ. ಇದೇ ಸಮಯದಲ್ಲಿ ತಮ್ಮ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. 1982 ಅಗಸ್ಟ್‌ 2 ಕ್ಕೆ ಕೂಲಿ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಅಮಿತಾಬ್‌ ಬಚ್ಚನ್‌ ಅವರಿಗೆ ಗಾಯ ಆಗಿತ್ತು. ಇನ್ನೇನ್‌ ಅವರು ಬದುಕೋದೇ ಇಲ್ಲ ಅಂತ ಸಹ ಡಾಕ್ಟರ್ಸ್‌ ಡಿಕ್ಲೇರ್‌ ಮಾಡಿದ್ರಂತೆ. ಆ ಟೈಮ್‌ನಲ್ಲಿ ಜಯಾ ಬಚ್ಚನ್‌ ಅವರು ಏನ್‌ ಮಾಡಿದ್ರು ಅನ್ನೋಬಗ್ಗೆ ಅಮಿತಾಬ್‌ ಬಚ್ಚನ್‌ ಒಂದು ಇಂಟರ್‌ವ್ಯೂನಲ್ಲಿ ಹೇಳಿದ್ದಾರೆ.”

ಕೂಲಿ ಚಿತ್ರದ ಆಕ್ಷನ್‌ ಸೀಕ್ವೇನ್ಸ್‌ಗಳನ್ನ ಶೂಟ್‌ ಮಾಡ್ತಾ ಇದ್ದಾಗ ಕಿಬ್ಬೊಟ್ಟೆಗೆ ಪೆಟ್ಟು ಬಿದ್ದು, ತುಂಬಾನೇ ರಕ್ತ ಸಾವ್ರ ಕೂಡ ಆಗಿತ್ತು. ನನ್ನನ್ನ ಹಾಸ್ಪಿಟಲ್‌ ಕರೆದುಕೊಂಡು ಹೋದ್ರು, ನಾನು ಕೋಮಾದಲ್ಲೇ ಇದ್ದೆ. ಒಂದು ಆಪರೇಷನ್‌ ಸಹ ಆಯ್ತು. 5 ದಿನ ಆದಮೇಲೆ ಮತ್ತೆ ನಾನು ಬಾಂಬೆಗೆ ಹೋದೆ, ಆ ಆಪರೇಷನ್‌ ಮಾಡಿದಾಗ ಹಾಕಿದ ಸ್ಟಿಚ್‌ಗಳೆಲ್ಲಾ ಒಪನ್‌ ಆಗಿತ್ತು, ಮತ್ತೊಂದು ಸಲ ಆಪರೇಷನ್‌ ಮಾಡಬೇಕು ಅಂತ ಹೇಳಿದ್ರು. ಸುಮಾರು 12 ರಿಂದ 14 ತಾಸುಗಳ ಕಾಲ ನಾನು ಪ್ರಜ್ಞೆ ಇಲ್ಲದೇನೆ ಮಲಗಿದ್ದೆ. ನನ್ನ ನಾಡಿಮಿಡಿತ, ಬಿಪಿ ಏಲ್ಲಾನೂ ಡೌನ್‌ ಆಗಿತ್ತು.” ಅಂತ ಹೇಳಿದ್ದಾರೆ.

ಇನ್ನೂ ಇದರ ಬಗ್ಗೆ ಜಯಾ ಬಚ್ಚನ್‌ ಕೂಡ ಮಾತನಾಡಿದ್ದಾರೆ. “ನಾನು ಹಾಸ್ಪಿಟಲ್‌ನಿಂದ ಮಕ್ಕಳನ್ನ ನೋಡೋಕೆ ಅಂತ ಮನೆಗೆ ಹೋದಾಗ ಅಮಿತಾಬ್‌ ಬಚ್ಚನ್‌ ಅವರ ಹೆಲ್ತ್‌ ತುಂಬಾನೇ ಹಾಳಾಗಿತ್ತು. ನಾನು ವಾಪಸ್‌ ಹಾಸ್ಪಿಟಲ್‌ಗೆ ಬಂದಾಗ ನನ್ನ ಮಾವ ನನ್ನನ್ನೇ ಹುಡುಕ್ತಾ ಇದ್ರು. ನೀನು ಈ ಟೈಮ್‌ನಲ್ಲಿ ತುಂಬಾ ಧೈರ್ಯದಿಂದ ಇರಬೇಕು ಅಂತೆಲ್ಲಾ ನನ್ನ ಮಾವ ನನಗೆ ಹೇಳೋಕೆ ಶುರು ಮಾಡಿದ್ರು. ಆಗ ಡಾಕ್ಟರ್‌ ಸಹ ನನ್ನ ಹತ್ರ ಬಂದು ನಮ್ಮ ಪ್ರಯತ್ನ ಏಲ್ಲಾ ಆಗಿದೆ, ಇನ್ನೇನಿದ್ರೂ ನಿಮ್ಮ ಪ್ರಾರ್ಥನೆ ಮಾತ್ರ ಅವರನ್ನ ಬದುಕಿಸಬಹುದು ಅಂತ ಹೇಳಿದ್ರು, ಆಗ ನನ್ನ ಕೈಲಿ ಹನುಮಾನ್‌ ಚಾಲಿಸ ಇತ್ತು. ನನಗೆ ಓದೋಕು ಸಹ ಆಗ್ತಾ ಇಲ್ಲ. ಡಾಕ್ಟರ್ಸ್‌ಗಳು ಅವರಿಗೆ ಏನ್‌ ಮಾಡ್ತಾ ಇದಾರೆ ಅಂತ ಸರಿಯಾಗಿ ಕಾಣ್ತಾ ಇರಲಿಲ್ಲ. ಆದ್ರೆ ಅವರ ಹಾರ್ಟ್‌ಗೆ ಬ್ಲಡ್‌ ಪಂಪ್‌ ಆಗಬೇಕು ಅಂತ ಎದೆಯನ್ನ ಒತ್ತುತ್ತಾ ಇದ್ರು, ಏನೇನೋ ಇಂಜೆಕ್ಷನ್‌ಗಳನ್ನ ಕೊಡ್ತಾ ಇದ್ರು. ಇದಷ್ಟೆ ನನಗೆ ಗೊತ್ತಾಗಿದ್ದು. ಸ್ವಲ್ಪ ಹೊತ್ತ್‌ ಆದಮೇಲೆ ಅವರ ಕಾಲಿನ ಬೆರಳು ಅಲುಗಾಡೋಕೆ ಶುರು ಆಯ್ತು. ಅವರು ಬದುಕಿದ್ದಾರೆ, ಅವರಿಗೆ ಏನು ಆಗ್ಲಿಲ್ಲ ಅಂತ ನಾನು ಎಲ್ಲರಿಗೂ ಕೂಗಿ ಹೇಳಿದ್ದೆ.” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply