ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿಗೆ ಗುಡ್ ಬೈ..!

ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಎಲ್ಲದಕ್ಕೂ ಗುಡ್‍ಬೈ ಹೇಳಲು ಕೇಂದ್ರ ಸರ್ಕಾರ ಮುಂದಾದ ಹಾಗಿದೆ. ಹೀಗೊಂದು ಪ್ರಶ್ನೆ ಏಳಲು ಕಾರಣ ಇವತ್ತು ಅಮಿತ್ ಶಾ ನೀಡಿದ ಹೇಳಿಕೆ. ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಬದಲು ಒಂದೇ ಕಾರ್ಡ್ ಇದ್ರೆ ಚೆನ್ನಾಗಿರುತ್ತೆ ಎಂದಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆಯಿಂದ ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಕಾರ್ಡ್‍ಗಳಿಗೂ ಗುಡ್ ಬೈ ಹೇಳೋಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆಯಾ ಅನ್ನೋ ಅನುಮಾನ ಮೂಡಿದೆ.

Contact Us for Advertisement

Leave a Reply