ನಟಿ ಆಮಿ ಜಾಕ್ಸನ್ಗೆ ಕೊನೆಗೂ ಸಂತಸದ ಸಮಯ ಬಂದಿದೆ. ಆಮಿ ಜಾಕ್ಸನ್ ತಾಯಿಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾವು ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿದ್ದ ಆಮಿ ಜಾಕ್ಸನ್, ಫೋಟೋ ಕೂಡ ಶೇರ್ ಮಾಡಿದ್ದರು. ಈಗ ಮಗುವಿಗೆ ಜನ್ಮ ನೀಡಿದ್ದು, ಫೋಟೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಆಮಿ ಮಗುವಿಗೆ ಹಾಲು ಕುಡಿಸುತ್ತಿದ್ದು, ಪತಿ ಜಾರ್ಜ್ ಪನಾಯಿಟೌ ಪಕ್ಕದಲ್ಲೇ ನಿಂತು ಆಮಿ ಹಣೆಗೆ ಕಿಸ್ ಕೊಡುತ್ತಿದ್ದಾರೆ. ಫೋಟೋ ಕೆಳಗೆ, ನಮ್ಮ ಏಂಜಲ್, ಏಂಡ್ರಿಯಜ್ಗೆ ಈ ಭೂಮಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಫೊಟೋ ಶೇರ್ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆಮಿ ಜಾಕ್ಸನ್ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
https://www.instagram.com/p/B2wCaALpayw/?utm_source=ig_web_copy_link
Contact Us for Advertisement