ಫೇಸ್​ಬುಕ್​ನಲ್ಲಿ ಇನ್ಮುಂದೆ ಫೇಸ್​ ರೆಕಗ್ನೈಸೇಷನ್ ಬಂದ್!

masthmagaa.com:

ಇತ್ತೀಚೆಗಷ್ಟೇ ಕಂಪನಿಯ ಹೆಸರನ್ನು ಮೇಟಾ ಅಂತ ಬದಲಿಸಿದ್ದ ಫೇಸ್​ಬುಕ್ ಈಗ ಫೇಸ್​​ ರೆಕಗ್ನೈಸೇಷನ್​​​​ ವ್ಯವಸ್ಥೆಯನ್ನು ಸ್ಥಗಿತಗೊಳಸಲು ಮುಂದಾಗಿದೆ. ಜೊತೆಗೆ ನೂರಾರು ಕೋಟಿ ಜನರ ಫೇಸ್​ ಪ್ರಿಂಟ್​​​ ದಾಖಲೆಯನ್ನು ಡಿಲೀಟ್ ಮಾಡಲು ಮುಂದಾಗಿದೆ. ಇತ್ತೀಚೆಗೆ ಪ್ರೈವೆಸಿ ಬಗ್ಗೆ ಭಾರಿ ಚರ್ಚೆಯಾಗಿದ್ದರಿಂದ ಈ ನಿರ್ಧಾರ ಕೈಗೊಂಡಿದೆ. ಸಂಸ್ಥೆಯ ಆಂತರಿಕ ದಾಖಲೆಗಳು ವರದಿಗಾರರು, ಶಾಸಕರು ಮತ್ತು ಅಮೆರಿಕದ ಸರ್ಕಾರಿ ಸಂಸ್ಥೆಗಳ ಕೈಗೆ ಸಿಕ್ಕ ಬಳಿಕ ಸಂಸ್ಥೆ ಭಾರಿ ಸಂಕಷ್ಟದಲ್ಲಿ ಸಿಲುಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಫೇಸ್​ಬುಕ್​ ಮಾತೃಸಂಸ್ಥೆ ಮೆಟಾ, ಸಮಾಜದಲ್ಲಿ ಫೇಶಿಯಲ್ ರೆಕಗ್ನೈಸೇಷನ್​​​ ತಂತ್ರಜ್ಞಾನದ ಸ್ಥಾನದ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಇಲ್ಲ. ಸರ್ಕಾರಗಳು ಕೂಡ ಈ ತಂತ್ರಜ್ಞಾನವನ್ನ ಹೇಗೆ ಬಳಸಬೇಕು ಅನ್ನೋ ಬಗ್ಗೆ ರೂಲ್ಸ್​ ತರಲು ಚಿಂತನೆ ನಡೆಸ್ತಿವೆ. ಈ ಅನಿಶ್ಚಿತತೆ ದೂರವಾಗೋವರೆಗೆ ಈ ತಂತ್ರಜ್ಞಾನವನ್ನು ಸೀಮಿತಗೊಳಿತ್ತಿದ್ದೇವೆ ಅಂತ ತಿಳಿಸಿದೆ. ಆದ್ರೆ ಇದು ಯಾವಾಗಿಂದ ಜಾರಿಗೆ ಬರಲಿದೆ..? ಯಾವಾಗಿಂದ ಫೇಸ್​ ರೆಕಗ್ನೈಸೇಷನ್ ತಂತ್ರಜ್ಞಾನ ಬಂದ್ ಆಗುತ್ತೆ ಅನ್ನೋ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಂದಹಾಗೆ ತಮ್ಮ ಬಳಕೆದಾರರ ಪೈಕಿ ಮೂರನೇ ಒಂದರಷ್ಟು ಜನ ಪ್ರತಿದಿನ ಈ ತಂತ್ರಜ್ಞಾನ ಬಳಸ್ತಿದ್ದಾರೆ ಅಂತ ಕೂಡ ಫೇಸ್​ಬುಕ್ ತಿಳಿಸಿದೆ.

-masthmagaa.com

Contact Us for Advertisement

Leave a Reply