ವಯಸ್ಸು 35 ದಾಟುವ ಮೊದಲೇ ಅಂಡಾಣು ಫ್ರೀಜ್‌ ಮಾಡಿದೆ: ಪ್ರಿಯಾಂಕಾ ಚೋಪ್ರಾ

masthmagaa.com:

ಕೆಲವು ವರ್ಷಗಳ ಹಿಂದೆ ಬಾಲಿವುಡ್‌ನಿಂದ ದೂರವಾಗಿ ಹಾಲಿವುಡ್‌ನಲ್ಲಿ ಬ್ಯೂಸಿ ಇರುವ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ರುಸ್ಸೋ ಬ್ರದರ್ಸ್‌ನ citadel ಹಾಲಿವುಡ್‌ ವೆಬ್‌ ಸಿರೀಸ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾಗೆ ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಎಂಬ ಮಗಳಿದ್ದಾಳೆ. ಅವರು ಮಾಲ್ಟಿಯನ್ನು 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಪಡೆದರು. ಈಗ, ಹೊಸ ಪಾಡ್‌ಕ್ಯಾಸ್ಟ್‌ನಲ್ಲಿ, ಪ್ರಸೂತಿ-ಸ್ತ್ರೀ ರೋಗತಜ್ಞರಾಗಿರುವ ತನ್ನ ತಾಯಿಯ ಸಲಹೆಯ ಮೇರೆಗೆ ತನ್ನ ಅಂಡಾಣುಗಳನ್ನು ಫ್ರೀಜ್ ಮಾಡಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ.

ಪಾಡ್‌ಕ್ಯಾಸ್ಟ್‌ಗಾಗಿ ಡಾಕ್ಸ್ ಶೆಫರ್ಡ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕ, ತನ್ನ 30 ರ ಹರೆಯದಲ್ಲಿ ತನ್ನ ಅಂಡಾಣುಗಳನ್ನು ಫ್ರೀಜ್ ಮಾಡಿರುವುದರ ಬಗ್ಗೆ ಮಾತನಾಡಿ, “ನಾನು ನನ್ನ 30ನೇ ವಯಸ್ಸಿನಲ್ಲಿ ನನ್ನ ಅಂಡಾಣುಗಳನ್ನ ಫ್ರೀಜ್‌ ಮಾಡುವ ನಿರ್ಧಾರ ಮಾಡಿದೆ, ಯಾಕೆಂದರೆ ನಾನು ನನಗಾಗಿ ನನ್ನ ವೃತ್ತಿ ಜೀವನದಲ್ಲಿ ಒಂದು ಐಡೆಂಟಿಟಿಯನ್ನ ಕ್ರೀಯೆಟ್‌ ಮಾಡಿಕೊಳ್ಳುವ ಹಾದಿಯಲ್ಲಿದ್ದೆ. ಅಷ್ದೇ ಅಲ್ಲದೇ ನನಗಾಗಿ ಮಗುವನ್ನ ಕೊಡಬಲ್ಲ ವ್ಯಕ್ತಿಯನ್ನ ನಾನು ಇನ್ನೂ ಭೇಟಿ ಆಗಿರಲಿಲ್ಲ.ಇದೇ ಸಮಯದಲ್ಲಿ ಪ್ರಸೂತಿ ತಜ್ಣರಾಗಿರುವ ನನ್ನ ತಾಯಿಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡೆ ಅಂತ ಹೇಳಿದ್ದಾರೆ.

“ನನ್ನ ತಾಯಿ ನನಗೆ ಇದನ್ನು ಮಾಡು ಅಂತ ಸಜೆಸ್ಟ್‌ ಮಾಡಿದ್ದರು, ಮತ್ತು ನಾನು ಅದನ್ನು ನನಗಾಗಿ ಮಾಡಿದ್ದೇನೆ. ನಾನು ಯುವಜನತೆಗೆ ಹೇಳಲು ಬಯಸೋದು ಒಂದೇ ಮಾತು, “35 ರ ನಂತರ ಗರ್ಭಿಣಿಯಾಗಲು ತುಂಬಾ ಕಷ್ಟವಾಗುತ್ತದೆ. ವಿಶೇಷವಾಗಿ ಜೀವನದುದ್ದಕ್ಕೂ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅದು ಕಷ್ಟ ಆಗತ್ತೆ. ಆದರೆ ವಿಜ್ಞಾನ ಇದೀಗ ತುಂಬಾ ಮುಂದುವರೆದಿದೆ, ಸೈನ್ಸ್‌ ಮುಖಾಂತರ ನೀವು ಏನ್‌ ಬೇಕಿದ್ರು ಪಡೆದುಕೊಳ್ಳಬಹುದು, ನಾನು ಹೇಳೊದ್‌ ಇಷ್ಟೆ ನೀವು ಕಾರಿಗೆ ಹಣವನ್ನು ಉಳಿಸಿ, ಈ ಕ್ರಿಸ್‌ಮಸ್‌ಗಾಗಿ ಅಂಡಾಣುವನ್ನ ಫ್ರೀಜ್‌ ಮಾಡಿ, ಇದು ನಿಮಗೆ ನೀವೇ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ. ನೀವು ಕೆಲಸವನ್ನ ಎಷ್ಟು ವರ್ಷದವರೆಗೂ ಬೇಕಾದರೂ ಮಾಡಬಹುದು, ಆದರೆ ಸರಿಯಾದ ವಯಸ್ಸಿನಲ್ಲಿ ಅಂಡಾಣುಯನ್ನ ಶೇಖರಿಸಿ ಇಟ್ಟರೆ ಮುಂದೆ ನಿಮಗೆ ಎಷ್ಟೇ ವಯಸ್ಸಾದರೂ ನೀವು ಶೇಖರಿಸಿಡುವಾಗ ನಿಮಗೆ ಎಷ್ಟು ವಯಸ್ಸಾಗಿತ್ತೊ ಅಷ್ಟೆ ವಯಸ್ಸು ನಿಮ್ಮ ಅಂಡಾಣುಗೆ ಆಗಿರತ್ತೆ” ಅಂತ ಹೇಳಿದ್ದಾರೆ.

ಇನ್ನೂ ಪ್ರಿಯಾಂಕಾ ಮತ್ತು ನಿಕ್‌ ಜೊನಸ್‌ ಮದುವೆಯಾಗಿದ್ದಾರೆ. ಆದರೆ ನಿಕ್‌ ಜೊನಸ್‌ ಜೊತೆಗೆ ಡೇಟ್‌ ಮಾಡೋಕೆ ಇಷ್ಟ ಇರಲಿಲ್ಲಅಂತ ಪ್ರಿಯಾಂಕ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಯಾಕಂದ್ರೆ “ನನಗೆ ಮಕ್ಕಳು ಅಂದ್ರೆ ತುಂಬಾನೇ ಇಷ್ಟ. ನಿಕ್‌ 25ನೇ ವಯಸ್ಸಿಗೆ ತಂದೆಯಾಗೋಕೆ ರೆಡಿ ಇದ್ರಾ ಇಲ್ವಾ ಅನ್ನೋ ಅನುಮಾನ ನನಗೆ ಇತ್ತು ಹಾಗಾಗಿ ಅವರನ್ನ ಡೇಟ್‌ ಮಾಡೋಕೆ ನನಗೆ ಇಷ್ಟ ಇರಲಿಲ್ಲ , ಆದರೆ ನನಗೆ ಮಕ್ಕಳು ಅಂದರೆ ತುಂಬಾನೇ ಇಷ್ಟ, ಮೊದಲಿನಿಂದನೂ ನಾನು ಮಕ್ಕಳ ಜೊತೆ ತುಂಬಾನೇ ಕ್ಲೋಸ್‌ ಇದ್ದೆ. UNICEF ಅಲ್ಲಿ ಮಕ್ಕಳ ಜೊತೆನೆ ನಾನು ಕೆಲಸ ಮಾಡಿದ್ದು, ಕಿಡ್ಸ್‌ ಹಾಸ್ಪಿಟಲ್‌ನಲ್ಲಿ ವಾಲೆಂಟಿಯರ್‌ ಆಗಿ ಕೆಲಸ ಮಾಡಿದ್ದೆ, ಮಕ್ಕಳ ಜೊತೆ ಟೈಮ್‌ ಸ್ಪೆಂಡ್‌ ಮಾಡೋದು ಅಂದರೆ ತುಂಬಾನೇ ಇಷ್ಟ. ಪಾರ್ಟಿಗಳಲ್ಲಿ ನನಗೆ ಮಕ್ಕಳು ಮತ್ತು ನಾಯಿ ತುಂಬಾನೇ ಕ್ಲೋಸ್‌. ನೀವು ನಮ್ಮ ಮನೆಗೆ ಮಕ್ಕಳನ್ನ ಯಾವಾಗ್‌ ಬೇಕಿದ್ರು ಕರಕೊಂಡು ಬರಬಹುದು” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply