ಹೈಟಿ ವಲಸಿಗರಲ್ಲಿ ಹೆಚ್ಚಿನವರಿಗೆ ಏಡ್ಸ್ ಇದೆ ಎಂದ ಟ್ರಂಪ್!

masthmagaa.com:

ಕೆರಿಬಿಯನ್ ದೇಶವಾದ ಹೈಟಿಯಿಂದ ಬರೋ ವಲಸಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೈಟಿಯಲ್ಲಿ ಎರಡೆರಡು ಭಾರಿ ಪ್ರಬಲ ಭೂಕಂಪ ಸಂಭವಿಸಿದ್ದು, ಜುಲೈನಲ್ಲಿ ಅಧ್ಯಕ್ಷ ಜೊವೆನೆಲ್ ಮೋಸೆಯನ್ನು ಹತ್ಯೆ ಮಾಡಲಾಗಿತ್ತು. ಇದ್ರ ಬೆನ್ನೊಲ್ಲೇ ಹೈಟಿಯಿಂದ ಸಾವಿರಾರು ಮಂದಿ ವಲಸಿಗರು ಅಮೆರಿಕಗೆ ಬರ್ತಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಇವರ ಬಗ್ಗೆ ಮಾತಾಡಿದ ಡೊನಾಲ್ಡ್ ಟ್ರಂಪ್​​, ಹೈಟಿ ವಲಸಿಗರಿಗೆ ಅಮೆರಿಕಗೆ ಪ್ರವೇಶಿಸಲು ಬಿಡೋದು ಸಾವಿಗೆ ಆಹ್ವಾನ ನೀಡಿದಂತೆ. ಯಾಕಂದ್ರೆ ಹೈಟಿ ವಲಸಿಗರಲ್ಲಿ ಹೆಚ್ಚಿನ ಜನರಿಗೆ ಏಡ್ಸ್​ ಕಾಯಿಲೆ ಇದೆ ಅಂತ ಹೇಳಿದ್ದಾರೆ. ಅಂದಹಾಗೆ ಹೈಟಿ ವಲಸಿಗರ ಬಗ್ಗೆ ಟ್ರಂಪ್ ಈ ರೀತಿ ಹೇಳಿಕೆ ನೀಡ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ಇಂಥಹ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ರು. 2017ರಲ್ಲಿ ವೈಟ್ ಹೌಸ್​ನಲ್ಲಿ ಮಾತನಾಡಿದ್ದ ಅವರು, ಅಮೆರಿಕದ ವೀಸಾ ಹೊಂದಿರೋ 15 ಸಾವಿರ ಮಂದಿ ಹೈಟಿ ಪ್ರಜೆಗಳಿಗೆ ಈ ಕಾಯಿಲೆ ಇದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply