ಚಿರಂಜೀವಿ ಮನೆಯಲ್ಲಿ ಮತ್ತೊಂದು ಡಿವೋರ್ಸ್‌ !

masthmagaa.com:

ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜೆವಿ ಪರಸ್ಪರ ಪ್ರೀತಿಸಿ ಮದುವೆ ಆದಂತ ಜೋಡಿ 2020ರಲ್ಲಿ ಮದುವೆ ಆಗಿದ್ರು. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿ ಆಗಿದ್ರು. ಮದುವೆ ಆಗಿ ಎರಡು ವರ್ಷ ಕಳೆಯುವುದರೊಳಗೆ ಈ ಜೋಡಿ ಡಿವೋರ್ಸ್‌ ಪಡೆದಿದೆ.

ಇದಕ್ಕೆ ನಿಜವಾದ ಕಾರಣ ಏನು ಅನ್ನೋದು ಗೊತ್ತಾಗಿಲ್ಲ, ಆದ್ರೆ ಕೆಲ ಮಾಧ್ಯಮಗಳ ವರದಿ ಪ್ರಕಾರ ಮದುವೆಗಿಂತ ಮೊದಲಿದ್ದ ಹೊಂದಾಣಿಕೆ ಮದುವೆ ಆದಮೇಲೆ ಇವರಿಬ್ಬರಲ್ಲಿ ಇರಲಿಲ್ಲ. ಹಾಗಾಗಿ ದೂರ ಆಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಇವರ ಮದುವೆಯನ್ನು ಕುಟುಂಬದವರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ. ಇದು ಅನೇಕರಿಗೆ ಬೇಸರ ಮೂಡಿಸಿದೆ. ನಿಹಾರಿಕಾ ಅವರು ಟಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply