‘ಕೇರಳ ಸ್ಟೋರಿ’ ತಂಡದಿಂದ ಇನ್ನೊಂದು ಸಿನಿಮಾ! ಏನಿದು BASTAR??

masthmagaa.com:

ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ಜಿಹಾದ್​ ಘಟನೆಗಳನ್ನು ಆಧರಿಸಿ ದಿ ಕೇರಳ ಸ್ಟೋರಿ ಮೂವಿ ರಿಲೀಸ್‌ ಆಗಿತ್ತು. ಸಿನಿಮಾ ಬಿಡುಗಡೆಯಾದ ನಂತರ ಪರ-ವಿರೋಧಗಳು ಸಹ ವ್ಯಕ್ತವಾಗಿತ್ತು. ಕೆಲವರು ಚಿತ್ರವನ್ನು ಪ್ರೊಪಗ್ಯಾಂಡ ಮೂವಿ ಅಂತ ದೂಷಣೆ ಮಾಡಿದ್ರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿತ್ತು. ಇಷ್ಟೆಲ್ಲಾ ಹೈಪ್‌ ಕ್ರೀಯೇಟ್‌ ಮಾಡಿದ್ದ ಚಿತ್ರತಂಡ ಇನ್ನೋಂದು ಹೈಪ್‌ ಕ್ರೀಯೇಟ್‌ ಮಾಡೋಕೆ ಹೊರಟಿದೆ.

ದಿ ಕೇರಳ ಸ್ಟೋರಿ ಸಿನಿಮಾವನ್ನ ನಿರ್ಮಾಣ ಮಾಡಿದಂತ ಸನ್‌ ಶೈನ್‌ ಪಿಕ್ಚರ್ಸ್‌ ಇದೀಗ ಸುದೀಪ್ತೋ ಸೇನ್‌ ಅವರ ಇನ್ನೊಂದು ಸಿನಿಮಾವನ್ನೂ ಕೂಡ ನಿರ್ಮಾಂ ಮಾಡಲಿದೆ. ಒಫಿಷಿಯಲ್‌ ಆಗಿ ಇದ್ರ ಬಗ್ಗೆ ಸನ್‌ ಶೈನ್‌ ಪಿಕ್ಚರ್ಸ್‌ ಹೊಸ ಸಿನಿಮಾದ ಒಂದು ಪೋಸ್ಟರ್‌ನ್ನ ಶೇರ್‌ ಮಾಡಿಕೊಂಡಿದೆ. ನೋಡ್ತಾ ಇದೀರಲ್ವಾ ಇದೇ ಹೊಸ ಸಿನಿಮಾದ ಪೋಸ್ಟರ್‌. ಇನ್ನು ಈ ಪೋಸ್ಟರ್‌ ಅನ್ನ ಡಿಟೇಲ್‌ ಆಗಿ ನೋಡೋದಾದ್ರೆ, ಒಂದು ದೊಡ್ಡ ಕಾಡು, ಒಂದು ಮರ ನೆಲಕ್ಕೆ ಉರುಳಿ ಬಿದ್ದಿದೆ, ಅಲ್ಲೇ ಒಂದು ರೆಡ್‌ ಫ್ಲಾಗ್‌ ಸಹ ಇದೆ. ಫುಲ್‌ ಹೊಗೆ ಇದೆ , ಸೈಡ್‌ ಅಲ್ಲಿ ಒಂದು ಗನ್‌ ಇದೆ. ಇದಿಷ್ಟು ಸಧ್ಯ ಪೋಸ್ಟರ್‌ ಅಲ್ಲಿರೋ ಮಾಹಿತಿ. ಇನ್ನೊಂದು ವಿಶೇಷ ಏನಪ್ಪಾ ಅಂತ ಅಂದ್ರೆ ಕ್ಯಾಪ್ಷನ್‌. “ದೇಶದಲ್ಲಿ ಸಂಚಲನ ಮೂಡಿಸಲಿದೆ ಅಡಗಿದ ಸತ್ಯ” ಅನ್ನೋ ಕ್ಯಾಪ್ಷನ್ ಕೂಡ ಇದೆ. ಅಷ್ಟೇ ಅಲ್ಲ ಈ ಸಿನಿಮಾ ಯಾವಾಗ ರಿಲೀಸ್‌ ಆಗತ್ತೆ ಅನ್ನೋ ಡೇಟ್‌ ಕೂಡ ಅನೌನ್ಸ್‌ ಮಾಡಿದ್ದಾರೆ. ಎಪ್ರಿಲ್‌ 5, 2024ಕ್ಕೆ ತೆರೆ ಮೇಲೆ ಬರೋಕೆ ಸಿನಿಮಾ ರೆಡಿ ಆಗ್ತಾ ಇದೆ. ಸಿನಿಮಾದ ಹೆಸರು ಬಸ್ತರ್‌ ಅಂತ ಕೊಟ್ಟಿದ್ದಾರೆ. ಬಸ್ತರ್‌ ಸಿನಿಮಾದಲ್ಲಿ ಯಾವ ನಿಜ ಘಟನೆಯನ್ನ ಹೊರ ತೆಗೆಯೋಕೆ ಪ್ರಯತ್ನ ಮಾಡಿದ್ದಾರೆ ಅಂತ ನೋಡಬೇಕು. ಸಿನಿಮಾದ ಕತೆ ಯಾವ ರೀತಿ ಇರತ್ತೆ, ಕಲಾವಿದರ ತಂಡ ಯಾವ್‌ ರೀತಿ ಇರತ್ತೆ. ಇದೆಲ್ಲ ಗೊತ್ತಗ್‌ಬೇಕು ಅಂದ್ರೆ ವೇಟ್‌ ಮಾಡಲೇ ಬೇಕು.

-masthmagaa.com

 

Contact Us for Advertisement

Leave a Reply