ನಿತಿನ್‌ – ರಶ್ಮಿಕಾ ಜೋಡಿಯ ಮತ್ತೊಂದು ಸಿನಿಮಾ!

masthmagaa.com:

ನ್ಯಾಷನಲ್‌ ಕ್ರಶ್‌ ಅಂತಾನೆ ಹೇಳಲಾಗುವ ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ʻಭೀಷ್ಮʼ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಒಟ್ಟಿಗೆ ರಂಜಿಸಲಿದ್ದಾರೆ. ಇನ್ನೂ ಈ ಸಿನಿಮಾಕ್ಕೆ ಮೆಗಾಸ್ಟರ್‌ ಚಿರಂಜೀವಿ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ʻಭೀಷ್ಮʼ ಸಿನಿಮಾ ಖ್ಯಾತಿಯ ನಿರ್ದೇಶಕ ವೆಂಕಿ ಕುದುಮುಲ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರದ ಟೈಟಲ್‌ ಇನ್ನೂ ನಿರ್ಧರಿಸಿಲ್ಲ.

ಸೌತ್‌ ಸಿನಿಮಾಗಳಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ರಶ್ಮಿಕಾ ಸದ್ಯ ರಣಬೀರ್‌ ಕಪೂರ್‌ ಜೊತೆಗೆ ʻಅನಿಮಲ್‌ʼ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಿಗ್‌ ಬಿ ಅಮಿತಾ ಬಚ್ಚನ್‌ ಅವರೊಂದಿಗೆ ಗುಡ್‌ ಬೈ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ, ಬಳಿಕ ಮಿಷನ್‌ ಮಜ್ನು ಸಿನಿಮಾದ ನಟಿಸಿದರು. ಇತ್ತೀಚೆಗೆ ಅಲ್ಲು ಅರ್ಜುನ್‌ ಜೊತೆಗೆ ಪುಷ್ಪ ಸಿನಿಮಾದಲ್ಲಿ ನಟಿಸಿ ಮತ್ತಷ್ಟು ಯಶಸ್ವಿಯಾಗಿದ್ದು , ಪುಷ್ಪ 2 ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

-masthmagaa.com

Contact Us for Advertisement

Leave a Reply