ಸರ್ಕಾರಿ ಶಾಲೆಯ ಮತ್ತೊಂದು ಅದ್ಬುತ ಕಥೆ ʻಪ್ರವೀಣಾʼ!

masthmagaa.com:

‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾ ಬಹಳಷ್ಟು ಯಶಸ್ಸು ಕಂಡಿತ್ತು. ಈಗ ಮತ್ತೇ ಸರ್ಕಾರಿ ಶಾಲೆಯ ಕಥೆ ಹೊಂದಿರುವ ಹೊಸ ಸಿನಿಮಾ ʻಪ್ರವೀಣಾʼ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮಕ್ಕಳ ಜೊತೆ ಮಂಡ್ಯ ರಮೇಶ್​ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಜಗದೀಶ್​ ಕೆ.ಆರ್​. ನಿರ್ಮಾಣದ ಈ ಸಿನಿಮಾಗೆ ಮಹೇಶ್​ ಸಿಂಧುವಳ್ಳಿ ನಿರ್ದೇಶನ ಮಾಡಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾದ ‘ಪ್ರವೀಣಾ’ ಸಿನಿಮಾ ಟ್ರೇಲರ್ ತುಂಬಾ​ ಗಮನ ಸೆಳೆಯುತ್ತಿದೆ. ಇನ್ನೂ ಸಂದರ್ಶನವೊಂದರಲ್ಲಿ ಮಾತನಾಡಿದ ಮಂಡ್ಯ ರಮೇಶ ‘ಈ ತಂಡದ ಪ್ರಯತ್ನ ಪ್ರಾಮಾಣಿಕವಾಗಿದೆ. ಪ್ರೇಕ್ಷಕರು ಇಂಥ ಸಿನಿಮಾಗಳನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಸಿನಿಮಾ ಏಪ್ರಿಲ್​ 7ರಂದು ಬಿಡುಗಡೆ ಆಗಲಿದೆ.

-masthmagaa.com

Contact Us for Advertisement

Leave a Reply