ಬೆಳಗಾವಿ ಗಲಾಟೆ ಬಗ್ಗೆ ಸದನದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

masthmagaa.com:

ಬೆಳಗಾವಿ ಗಲಾಟೆಗೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿ ಕರ್ನಾಟಕದ್ದು, ಸೂರ್ಯ ಚಂದ್ರ ಇರೋವರೆಗೂ ಅದು ಕರ್ನಾಟಕದ ಜೊತೆಗೆ ಇರುತ್ತೆ ಅಂದ್ರು. ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿ ಅಂತಿಮ. ಕರ್ನಾಟಕ ನೆಲದ ಒಂದಿಂಚೂ ಭೂಮಿಯನ್ನೂ ಬಿಟ್ಟುಕೊಡಲ್ಲ. ಅಷ್ಟೇ ಅಲ್ಲ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರೋ ಕನ್ನಡಿಗರು ಕರ್ನಾಟಕಕ್ಕೆ ಸೇರ್ತಿವಿ ಅಂದ್ರೆ ಅದಕ್ಕೂ ಸಿದ್ಧರಿದ್ದೀವಿ ಅಂದ್ರು.ಇನ್ನು ಮೂರ್ತಿಗಳನ್ನ ಭಂಗ ಮಾಡಿದವರನ್ನ ಅರೆಸ್ಟ್ ಮಾಡಿದ್ದೀವಿ. ಇಂಥವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆ ಕೇಸ್​ ಹಾಕ್ತೀವಿ ಅಂದ್ರು. ಹಾಗೇ ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಸ್ಥಾಪಿಸ್ತೀವಿ ಅಂತ ಕೂಡ ಸಿಎಂ ಅನೌನ್ಸ್ ಮಾಡಿದ್ರು. ಕೊನೆಗೆ ಎಂಇಎಸ್​ ಪುಂಡಾಟ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಮೂರ್ತಿಗಳ ವಿರೂಪ, ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನ ಸುಟ್ಟಿದ್ದು, ಬಸವೇಶ್ವರರಿಗೆ ಮಾಡಿದ ಅವಮಾನ ಎಲ್ಲವನ್ನ ಖಂಡಿಸುವ ನಿರ್ಣಯವನ್ನ ವಿಧಾನಸಭೆಯಲ್ಲಿ ಒಕ್ಕೊರಲಿನಿಂದ ಪಾಸ್​ ಮಾಡಲಾಯ್ತು.

-masthmagaa.com

Contact Us for Advertisement

Leave a Reply