ಅಫ್ಘಾನಿಸ್ತಾನವನ್ನು ಇಷ್ಟು ಬೇಗ ಟೇಕೋವರ್ ಮಾಡುತ್ತೆ ಅನ್ಕೊಂಡಿರಲಿಲ್ಲ: ಬಿಪಿನ್ ರಾವತ್

masthmagaa.com:

ಅಫ್ಘನಿಸ್ತಾನ ಪರಿಸ್ಥಿತಿ ಬಗ್ಗೆ ಭಾರತದ ಚೀಫ್ ಆಫ್​ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಇವತ್ತು ಮಾತನಾಡಿದ್ದಾರೆ. ಅಫ್ಘನಿಸ್ತಾನವನ್ನ ತಾಲಿಬಾನ್​ ಟೆಕೋವರ್​ ಮಾಡುತ್ತೆ ಅನ್ನೋ ನಿರೀಕ್ಷೆ ನಮಗಿತ್ತು. ಆದ್ರೆ ಇಷ್ಟುಬೇಗ ಆಗುತ್ತೆ ಅಂದುಕೊಂಡಿರಲಿಲ್ಲ. ಕೆಲ ತಿಂಗಳು ಆಗ್ಬೋದು ಅಂದುಕೊಂಡಿದ್ದೆವು. ಈಗಿರೋ ತಾಲಿಬಾನ್​​ 20 ವರ್ಷದ ಹಿಂದೆ ಹೇಗಿತ್ತೋ ಅದೇರೀತಿ ಇದೆ. ಕೇವಲ ಅವರ ಪಾರ್ಟ್​​ನರ್​ ಚೇಂಜ್ ಆಗಿದ್ದಾರೆ ಅಂತ ಬಿಪಿನ್ ರಾವತ್ ಹೇಳಿದ್ದಾರೆ. ಜೊತೆಗೆ ಅಫ್ಘನಿಸ್ತಾನ ನೆಲದಿಂದ ಉಗ್ರ ಚಟುವಟಿಕೆಗಳು ಭಾರತಕ್ಕೆ ಹೇಗೆ ಬರಬಹುದು ಅನ್ನೋ ಬಗ್ಗೆ ಚಿಂತಿತರಾಗಿದ್ವಿ. ಅದನ್ನ ಎದುರಿಸಲು ಸಿದ್ಧರಿದ್ದೀವಿ ಅಂತಾನೂ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ದಿ ಇಂಡಿಯಾ-ಯುಎಸ್ ಪಾರ್ಟ್​​ನರ್​​ಶಿಪ್​​: ಸೆಕ್ಯೂರಿಂಗ್​ ದಿ ಟ್ವೆಂಟಿಫಸ್ಟ್ ಸೆಂಚುರಿ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಾರೆ.

-masthmagaa.com

Contact Us for Advertisement

Leave a Reply