ದಕ್ಷಿಣ ಕೊರಿಯಾಗೆ ಹಾರಲಿರೊ ಆಂಟನಿ ಬ್ಲಿಂಕನ್‌: ಕಿಮ್ಮಣ್ಣನಿಗೆ ಅಮೆರಿಕ ಮೆಸೇಜ್?‌

masthmagaa.com:

ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್‌ ಅವರು ದಕ್ಷಿಣ ಕೊರಿಯಾಗೆ ನವೆಂಬರ್‌ 8 ಮತ್ತು 9 ರಂದು ಎರಡು ದಿನಗಳ ಭೇಟಿ ನೀಡಲಿದ್ದಾರೆ. ಉತ್ತರ ಕೊರಿಯಾದ ಸೆಕ್ಯುರಿಟಿ ಥ್ರೆಟ್‌, ದಕ್ಷಿಣ ಕೊರಿಯ ಜೊತೆಗಿನ ಆರ್ಥಿಕ ಭದ್ರತೆ, ಸಹಕಾರ, ಕೈಗಾರಿಕ ಒಪ್ಪಂದಗಳ ಬಗ್ಗೆ ಚರ್ಚಿಸೋಕೆ ಬ್ಲಿಂಕನ್‌ ಭೇಟಿ ನೀಡಲಿದ್ದಾರೆ ಅಂತ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಪಾರ್ಕ್‌ ಜಿನ್‌ ಹೇಳಿದ್ದಾರೆ. ಅಂದ್ಹಾಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ರಷ್ಯಾಗೆ ರಾಶಿ ರಾಶಿ ಯುದ್ದ ಸಾಮಗ್ರಿಗಳನ್ನ ಕಳಿಸಿರೋ ವಿಚಾರವಾಗಿ ದಕ್ಷಿಣ ಕೊರಿಯಾ, ಜಪಾನ್‌, ಅಮೆರಿಕಗಳು ವಿರೋಧಿಸಿದ್ವು. ಅದರ ಬೆನ್ನಲ್ಲೆ ಮೂರು ದೇಶಗಳು ಸೋಲ್‌ ಬಳಿ ತ್ರಿಪಕ್ಷೀಯ ಯುದ್ಧಾಭ್ಯಾಸ ನಡೆಸಿದ್ವು. ಇದನ್ನ ಉತ್ತರ ಕೊರಿಯಾ ವಿರೋಧಿಸಿತ್ತು. ಅಲ್ದೇ ಕಳೆದ ಹಲವು ವರ್ಷಗಳಿಂದ ಕಿಮ್ಮಣ್ಣ, ಲಾಂಗ್‌ ರೇಂಜ್‌ ಬ್ಯಾಲೆಸ್ಟಿಕ್‌ ಮಿಸೈಲ್‌ ಸೇರಿದಂತೆ ತಮ್ಮ ಟ್ಯಾಕ್ಟಿಕಲ್‌ ವೆಪನ್‌ಗಳ ಅಭಿವೃದ್ಧಿಯನ್ನ ಎಸ್ಕಲೇಟ್‌ ಮಾಡ್ತಾನೆ ಇದಾರೆ. ಇದರಿಂದ ದಕ್ಷಿಣ ಕೊರಿಯಾಗೆ ಒಂಥರ ಹೆಬ್ಬಾವಿನ ಪಕ್ಕದಲ್ಲಿ ಮಲಗಿರೊ ಪರಿಸ್ಥಿತಿ ಇದೆ. ಸದ್ಯ ಸುಮಾರು ಎರಡೂ ವರೆ ವರ್ಷಗಳ ನಂತರ ಅಮೆರಿಕನ್‌ ಅಧಿಕಾರಿಯೊಬ್ರು ಭೇಟಿ ನೀಡ್ತಿರೋದು ದಕ್ಷಿಣ ಕೊರಿಯಾಗೆ ಕೊಂಚ ರಿಲೀಫ್ ನೀಡಲಿದೆ.

-masthmagaa.com

Contact Us for Advertisement

Leave a Reply