ಕೇನ್ಸ್‌ ಸಿನಿಮೋತ್ಸವದ ಆಹ್ವಾನ ಪಡೆದ ಅನುಷ್ಕಾ ಶರ್ಮಾ !

masthmagaa.com:

ಈ ವರ್ಷದ ಕೇನ್ಸ್‌ ಸಿನಿಮೋತ್ಸವಕ್ಕೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರಿಗೆ ಆಹ್ವಾನ ಸಿಕ್ಕಿದೆ. ಕೇನ್ಸ್‌ ಸಿನಿಮೋತ್ಸವ ಫ್ರಾನ್ಸ್‌ನಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಲು ವಿವಿಧ ದೇಶಗಳಿಂದ ಸೆಲೆಬ್ರಿಟಿಗಳು ಬರುತ್ತಾರೆ. 2023ನೇ ಸಾಲಿನ ಕಾನ್‌ ಸಿನಿಮೋತ್ಸವ ಮೇ 16ರಿಂದ ಶುರುವಾಗಿ ಮೇ 27ರವರೆಗು ನಡೆಯಲಿದೆ. ಈ ವರ್ಷ ಅನುಷ್ಕಾ ಶರ್ಮಾ ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವಿಚಾರವನ್ನು ಫ್ರೆಂಚ್‌ ರಾಯಭಾರಿ ಇಮ್ಯಾನ್ಯುವೆಲ್‌ ಲುನಾ ಖಚಿತಪಡಿಸಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯನ್ನು ಭೇಟಿಯಾಗಿ ಕಾನ್‌ ಸಿನಿಮೋಹತ್ಸವಕ್ಕೆ ಆಹ್ವಾನ ನೀಡಿದ್ದಾರೆ.

ಟ್ವಿಟರ್​ನಲ್ಲಿ ಈ ಬಗ್ಗೆ ಇಮ್ಯಾನ್ಯುವೆಲ್ ಅವರು ಬರೆದುಕೊಂಡಿದ್ದಾರೆ. ‘ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿತು. ವಿರಾಟ್ ಹಾಗೂ ಟೀಂ ಇಂಡಿಯಾಗೆ ನಾನು ವಿಶ್ ಮಾಡಿದೆ. ಕಾನ್ ಸಿನಿಮೋತ್ಸವದ ಕುರಿತು ಅನುಷ್ಕಾ ಜೊತೆ ಚರ್ಚೆ ಮಾಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ದಂಪತಿ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

2022ನೇ ಸಾಲಿನ ಕಾನ್‌ ಸಿನಿಮೋಹತ್ಸವದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ವಿವಿಧ ರೀತಿಯ ಡ್ರೆಸ್‌ ತೊಟ್ಟುಕೊಂಡು ದೀಪಿಕಾ ಪಡುಕೋಣೆ ಮಿಂಚಿದ್ದರು.

-masthmagaa.com

Contact Us for Advertisement

Leave a Reply