ಸೌದಿ ಅರೇಬಿಯಾದಲ್ಲಿ ಹಳೆಯ ಸಾಮ್ರಾಜ್ಯದ ಅವಶೇಷಗಳ ಹುಡುಕಾಟ!

masthmagaa.com:

ಸೌದಿ ಅರೇಬಿಯಾದ ಉತ್ತರ ಪಶ್ಚಿಮ ಭಾಗದಲ್ಲಿರೋ ಅಲ್​​ಉಲಾದಲ್ಲಿರೋ ಪರ್ವತಗಳಲ್ಲಿ ಪುರಾತತ್ವ ಇಲಾಖೆ ತಜ್ಞರು ಜನ ಮರೆತು ಹೋಗಿರೋ ಸಾಮ್ರಾಜ್ಯಗಳ ಅವಶೇಷಗಳನ್ನು ಹುಡುಕೋಕೆ ಹೊರಟಿದ್ದಾರೆ. ಡಾಡನ್ ಮತ್ತು ಲಿಹ್ಯಾನ್ ಅನ್ನೋ ಸಾಮ್ರಾಜ್ಯಗಳು ಇವಾಗಿದ್ದು, ಅಲ್​ ಉಲಾದಲ್ಲಿದ್ದವು ಅಂತ ಭಾವಿಸಲಾಗಿದೆ. ಅಲ್ ಉಲಾ ಒಂದು ಪ್ರವಾಸಿ ತಾಣವಾಗಿದ್ದು, 2019ರಲ್ಲಿ ಪ್ರವಾಸಿಗರಿಗೆ ತೆರೆಯಲಾಗಿತ್ತು. ಈ ನಗರದಲ್ಲಿ ಮದೈನ್ ಸಾಲೇ ಅವರ ಸಮಾಧಿ ಇದ್ದು, 2 ಸಾವಿರ ವರ್ಷಗಳ ಹಿಂದೆ ಕಲ್ಲಿನಿಂದ ಕೆತ್ತಿ ಈ ನಗರ ನಿರ್ಮಿಸಲಾಗಿದೆ. ಇನ್ನು ಇಲ್ಲಿ ಇಸ್ಲಾಂ ಪೂರ್ವ ಅರಬ್ಬರು ಇದ್ರು ಅಂತ ತಜ್ಞರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply