ರಶ್ಮಿಕಾ – ವಿಜಯ್‌ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ?

masthmagaa.com:

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇಬ್ಬರೂ ಡೇಟಿಂಗ್‌ಲ್ಲಿ ಇದ್ದಾರೆ ಅಂತಾ ತುಂಬಾ ದಿನಗಳಿಂದ ಗಾಸಿಪ್‌ ಹರಿದಾಡುತ್ತಿದೆ. ಈಗ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಅನ್ನೂ ಸುದ್ದಿ ಕೇಳಿಬರುತ್ತಿದೆ. ನಿನ್ನೆಯಷ್ಟೇ ರಶ್ಮಿಕಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳುವ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿನ ಬ್ಯಾಗ್ರೌಂಡ್‌ ಹಾಗೂ ವಿಜಯ್‌ ದೇವರಕೊಂಡ ಅವರ ಮನೆ ಬ್ಯಾಗ್ರೌಂಡ್‌ ಒಂದೇ ಆಗಿದೆ. ವಿಡಿಯೋದಲ್ಲಿ ರಶ್ಮಿಕಾ ಕೈಯಲ್ಲಿದ್ದ ರಿಂಗ್‌ ವಿಜಯ್‌ ಬರ್ತಡೇ ಗಿಪ್ಟ್‌ ಅಂತಾ ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಸೌತ್‌ ಡಿಜಿಟಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರನ್ನ ಟ್ಯಾಗ್‌ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ರಶ್ಮಿಕಾ ”ಅಯ್ಯೋ ಬಾಬು ಓವರ್‌ ಥಿಂಕ್‌ ಮಾಡಬೇಡಪ್ಪಾ” ಎಂದು ಕಾಮೆಂಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply