ಹೈಟಿಗೆ ಹೊಸ ಪ್ರಧಾನಮಂತ್ರಿ! ಯಾರು ಗೊತ್ತಾ?

masthmagaa.com:

ಹೈಟಿ ಅಧ್ಯಕ್ಷ ಜೊವೆನೆಲ್ ಮೋಸೆ ಹತ್ಯೆ ಬಳಿಕ ಏರಿಯಲ್ ಹೆನ್ರಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದೊಂದಿಗೆ ಇವರು ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜೊವೆನೆಲ್ ಮೋಸೆ ಹತ್ಯೆ ಬಳಿಕ ಸೃಷ್ಟಿಯಾಗಿದ್ದ, ನಾಯಕತ್ವ ಕೊರತೆಯನ್ನು ತುಂಬಿದ್ದಾರೆ. ಏರಿಯಲ್ ಹೆನ್ರಿಯವರನ್ನು ಜೊವೆನೆಲ್ ಮೋಸೆ ತಮ್ಮ ಹತ್ಯೆಗೂ ಮುನ್ನವೇ ಪ್ರಧಾನಿಯಾಗಿ ನಿಯೋಜಿಸಿದ್ರು. ಆದ್ರೆ ಏರಿಯಲ್ ಹೆನ್ರಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಅಂದಹಾಗೆ ಜುಲೈ 7ರಂದು ಜೊವೆನೆಲ್ ಮೋಸೆಯವ್ರನ್ನ ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿತ್ತು. ನಂತರ ದೇಶದ ಪೊಲೀಸ್ ಮತ್ತು ಮಿಲಿಟರಿ ಪಡೆಗಳ ಬೆಂಬಲದೊಂದಿಗೆ ಕ್ಲೌಡ್ ಜೋಸೆಫ್ ಸರ್ಕಾರ ನಡೆಸ್ತಿದ್ರು. ಈಗ ಅವರ ಜಾಗವನ್ನು ಏರಿಯಲ್ ಹೆನ್ರಿ ತುಂಬಿದ್ದಾರೆ. ಕ್ಲೌಡ್ ಜೋಸೆಫ್ ವಿದೇಶಾಂಗ ಸಚಿವರಾಗಿ ಮುಂದುವರಿಯೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply